ಚಿತ್ತಾಪುರ: ಸ್ವಾತಂತ್ರ್ಯದಿನದಂದು ಕಚೇರಿಗಳ ಮೇಲೆ ತ್ರಿವರ್ಣ ಬಾವುಟ ಹಾರಿಸದ ಆರ್ ಎಸ್ ಎಸ್ ನಿಜವಾಗಿಯೂ ಅವರು ದೇಶದ್ರೋಹಿಗಳಿರುವ ಸಂಘಟನೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಚಿತ್ತಾಪುರದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿಲಾದ ಅಮೃತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಿರಂಗಾ ಅಪಶಕುನವೆಂದು ಹೇಳಿ ಆರ್ ಎಸ್ ಎಸ್ ಧ್ವಜಾರೋಹಣ ಮಾಡಿಲ್ಲ. ಕೋಮುವಾದಿಗಳು ಇತ್ತೀಚೆಗೆ ದೇಶಭಕ್ತಿಯ ಮಾತನಾಡಲು ಆರಂಬಿಸಿದ್ದಾರೆ. ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಕೊಡುಗೆಯನ್ನು ಜನತೆ ಮರೆತಿಲ್ಲ ಎಂದರು.