ಬೆಂಗಳೂರು: ಆರ್ ಎಸ್ ಎಸ್ ಮಕ್ಕಳ ಮನಸ್ಸುನ್ನು ಪಠ್ಯೇತರ ಚಟುವಟಿಕೆಗಳೆಡೆಗೆ ಸಳೆಯುತ್ತಿದೆ. ಸರ್ಕಾರಿ ಶಾಲೆಗಳಿಗೆ ಕೂಡ ಲಗ್ಗೆ ಇಡುತ್ತಿದೆ. ಶಾಲೆಗಳಲ್ಲಿ ಆರ್ ಎಸ್ ಎಸ್ ಶಿಬಿರ ನಡೆಸಲು ಅನುಮತಿ ನೀಡಬಾರದು ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಆಗ್ರಹಿಸಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಸಂಚಾರ; ನಿವೃತ್ತ ಯೋಧ ಸಾವು
ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಉಪನಾಯಕ ಕಾಶೆಂಪೂರ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರ್ ಎಸ್ ಎಸ್ ಶಿಬಿರ ನಡೆಸುತ್ತಿದೆ. ಹೀಗಾಗಿ ಈ ಶಾಲೆಯಲ್ಲಿ ಆರ್ ಎಸ್ ಎಸ್ ಶಿಬಿರಕ್ಕೆ ಅನುಮತಿ ನೀಡಿದ್ದಾರೆ. ಮೊರಾರ್ಜಿ ಸವತಿ ಶಾಲೆಯಲ್ಲಿ ಶಿಬಿರ ಆಯೋಜಿಸಲು ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳ ಕಡೆಗೆ ಸೆಳೆಯವ ಕೆಲಸ ಮಾಡಲಾಗುತ್ತಿದೆ . ಈ ಹಿಂದೆ ಬೇರೆ ಬೇರೆ ಕಡೆಗಳಲ್ಲಿ ಶಿಬಿರಗಳನ್ನ ನಡೆಸುತ್ತಿದ್ದ ಆರ್ ಎಸ್ ಎಸ್ ಇತ್ತೀಚೆಗೆ ವಸತಿ ಶಾಲೆಗಳಿಗೆ ಲಗ್ಗೆ ಇಡುತ್ತೀವೆ. ನನ್ನ ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಿರುವುದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.