ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಜನರಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನ ನೀಡುತ್ತವೆ. ಈ ವೇದಿಕೆಗಳ ಮೂಲಕ, ಜನರು ತಮ್ಮ ಧ್ವನಿಯನ್ನ ದೊಡ್ಡ ಜನಸಂಖ್ಯೆಗೆ ತಲುಪಲು ಸಾಧ್ಯವಾಗುತ್ತದೆ. ಇಷ್ಟೇ ಅಲ್ಲ, ಅನೇಕ ಜನರು ತಮ್ಮ ಸುತ್ತ ನಡೆಯುತ್ತಿರುವ ಸಮಸ್ಯೆಗಳನ್ನ ಸಾರ್ವಜನಿಕವಾಗಿ ಸುಲಭವಾಗಿ ಪ್ರಸ್ತಾಪಿಸಬಹುದು. ಜನರು ಕೇವಲ ಸಾಮಾಜಿಕ ಮಾಧ್ಯಮದ ಪ್ರಯೋಜನವನ್ನ ಪಡೆಯುತ್ತಿದ್ದಾರೆ. ಆದ್ರೆ, ಸ್ಕ್ಯಾಮರ್ಗಳು ಈ ಪ್ಲಾಟ್ಫಾರ್ಮ್’ಗಳಲ್ಲಿ ತಮ್ಮ ಗುರಿಗಳನ್ನ ಸಹ ಕಂಡುಕೊಳ್ಳುತ್ತಾರೆ.
ಜನರ ತಪ್ಪಿನಿಂದಾಗಿ ವಂಚಕರು ಹಣ ವಂಚಿಸುತ್ತಾರೆ. ಮುಂಬೈನಲ್ಲಿ ಮಹಿಳೆಯೊಬ್ಬರಿಗೆ ಅಂತಹದ್ದೇ ಘಟನೆ ನಡೆದಿದೆ. ಮಹಿಳೆಯ ಒಂದು ತಪ್ಪಿನಿಂದಾಗಿ ವಂಚಕರು 64,000 ರೂಪಾಯಿ ದೋಚಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದಾದ್ರು ಏನು.?
ಇಡೀ ವಿಷಯ ಏನು?
ವಾಸ್ತವವಾಗಿ, ಬಲಿಪಶು ತನ್ನ RAC ಟಿಕೆಟ್ನ ನವೀಕರಣವನ್ನ ತಿಳಿದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಟ್ವಿಟರ್ನಲ್ಲಿ IRCTC ಟ್ಯಾಗ್ ಮಾಡುವ ಮೂಲಕ ಟ್ವೀಟ್ ಮಾಡಿದ್ದಾಳೆ. ಈ ಟ್ವೀಟ್ನಲ್ಲಿ ಅವರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಟಿಕೆಟ್ ವಿವರಗಳನ್ನ ಹಂಚಿಕೊಂಡಿದ್ದಾರೆ.
MN ಮೀನಾ IRCTC ವೆಬ್ಸೈಟ್ನಿಂದ ಜನವರಿ 14ಕ್ಕೆ ಮೂರು ಟಿಕೆಟ್ಗಳನ್ನ ಬುಕ್ ಮಾಡಿದ್ದು, ಅವರ ಟಿಕೆಟ್ಗಳು RAC ಆಯಿತು. ಅವರು ತಮ್ಮ ಟಿಕೆಟ್ ವಿಚಾರಣೆಗಾಗಿ IRCTCಗೆ ತಮ್ಮ ಸಂಖ್ಯೆ ಮತ್ತು ರೈಲು ಟಿಕೆಟ್ ಟ್ವೀಟ್ ಮಾಡಿದ್ದರು. ವಂಚಕರು ಆಕೆಯ ತಪ್ಪಿನ ಲಾಭ ಪಡೆದು ವಂಚಿಸಿದ್ದಾರೆ.
2 ರೂಪಾಯಿ ಪಾವತಿಸಿದ್ದಕ್ಕೆ 64 ಸಾವಿರ ಕಡಿತಗೊಳಿಸಲಾಗಿದೆ.!
ಟ್ವೀಟ್ ಮಾಡಿದ ಸ್ವಲ್ಪ ಸಮಯದ ನಂತ್ರ MN ಮೀನಾ ಅವರಿಗೆ ಸ್ಕ್ಯಾಮರ್ಗಳಿಂದ ಕರೆ ಬಂದಿತು. ಸ್ಕಾಮರ್ಗಳು ತಮ್ಮನ್ನು IRCTC ಯ ಗ್ರಾಹಕ ಬೆಂಬಲ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡರು. RAC ಟಿಕೆಟ್ ದೃಢೀಕರಿಸಲು ಸಹಾಯ ಮಾಡುವಂತೆ ಕೇಳಿದರು. ಇದರ ನಂತರ, ವಂಚಕ, ಮಹಿಳೆಯ ಫೋನ್ಗೆ ಲಿಂಕ್ ಕಳುಹಿಸಿ, ಎಲ್ಲಾ ವಿವರಗಳನ್ನ ಭರ್ತಿ ಮಾಡಲು ಕೇಳಿದನು. ಇದರೊಂದಿಗೆ ವಂಚಕ ಎರಡು ರೂಪಾಯಿ ವಹಿವಾಟು ಮಾಡುವಂತೆಯೂ ಹೇಳಿದ್ದಾನೆ. ವಂಚಕನು ಹೇಳಿದಂತೆ ಮಹಿಳೆ ಮಾಡಿದ್ದಾಳೆ. ಆಕೆ ಪ್ರಕ್ರಿಯೆಯನ್ನ ಅನುಸರಿಸಿದ ತಕ್ಷಣ, ತಮ್ಮ ಖಾತೆಯಿಂದ 64,011 ರೂಪಾಯಿ ಕಡಿತವಾಗಿದೆ ಎನ್ನುವ ಸಂದೇಶವನ್ನ ಸ್ವೀಕರಿಸಿದ್ದಾಳೆ.
ನಂತ್ರ ವಂಚನೆಯನ್ನ ಅರಿತ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ವಿಲೆ ಪಾರ್ಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ವಂಚನೆಯ ಬಗ್ಗೆ ತಿಳಿದ ನಂತ್ರ ಮಹಿಳೆ ಹಲವಾರು ಬಾರಿ ಆ ಸಂಖ್ಯೆಗೆ ಕರೆ ಮಾಡಿದರೂ, ನಂಬರ್ ಆಫ್ ಆಗಿತ್ತು.
BREAKING NEWS : ಬ್ರಿಟನ್ ದೊರೆ ‘ಚಾರ್ಲ್ಸ್- 3’ರ ಜೊತೆ ‘ಪ್ರಧಾನಿ ಮೋದಿ’ ದೂರವಾಣಿ ಸಂಭಾಷಣೆ ; ಮಹತ್ವದ ಮಾತುಕತೆ