ಕೊಪ್ಪಳ : ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ನ ಗೇಟ್ ತಾತ್ಕಾಲಿಕ ಅಳವಡಿಕೆ ಯಶಸ್ವೀಯಾದ ಹಿನ್ನೆಲೆಯಲ್ಲಿ, ಗೇಟ್ ಅಳವಡಿಕೆಗೆ ಹಗಲಿರುಳು ಶ್ರಮಿಸಿದ ಸಿಬ್ಬಂದಿಗಳಿಗೆ ಡ್ಯಾಂ ಆವರಣದಲ್ಲಿ ಶಾಸಕ ಗಣೇಶ್ ಸನ್ಮಾನಿಸಿದರು.
ಹೌದು ತುಂಗಭದ್ರಾ ಡ್ಯಾಮ್ ನ 19ನೇ ಕ್ರಸ್ಟ್ ಗೇಟ್ ನೀರಿನ ರಭಸದಿಂದ ಕೊಚ್ಚಿ ಹೋಗಿತ್ತು. ಹೀಗಾಗಿ ಅಪಾರ ಪ್ರಮಾಣದ ನೀರು ತುಂಗಭದ್ರ ಡ್ಯಾಮ್ ನಿಂದ ಹರಿದು ಹೋಗಿತ್ತು. ಈ ವೇಳೆ ಕಳೆದ ಕೆಲವು ದಿನಗಳಿಂದ ನಿರಂತರ ಶ್ರಮದಿಂದ ಒಟ್ಟು 5 ಎಲಿಮೆಂಟ್ ಯಶಸ್ವಿಯಾಗಿ ಎಲ್ಲ ಸಿಬ್ಬಂದಿಗಳು ಅಳವಡಿಸಿದ್ದಾರೆ.
ಹಾಗಾಗಿ ಟಿಬಿ ಡ್ಯಾಂನ ಆವರಣದಲ್ಲಿ ಎಲ್ಲ ಸಿಬ್ಬಂದಿಗಳಿಗೆ ಶಾಸಕ ಗಣೇಶ್ ಅವರಿಂದ ಸನ್ಮಾನಿಸಲಾಯಿತು. ಶಾಸಕ ಗಣೇಶ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಕೊಟ್ಟ ಮಾತಿನಂತೆ ಕಾರ್ಮಿಕರಿಗೆ ತರ ತಲಾ 50000 ಬಹುಮಾನ ನೀಡಲಾಯಿತು. ಕವರ್ ನಲ್ಲಿ ಹಣವಿಟ್ಟು ಸಚಿವ ಜಮೀರ್ ಅಹ್ಮದ್ ಕಾರ್ಮಿಕರಿಗೆ ಬಹುಮಾನ ವಿತರಿಸಿದರು.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಜಮೀರ್ ಸೂಚನೆ ಮೇರೆಗೆ ಶಾಸಕ ಗಣೇಶನ ನೇತೃತ್ವದಲ್ಲಿ ಬಹುಮಾನ ವಿತರಿಸಲಾಯಿತು. ನಾರಾಯಣ ಇಂಜಿನಿಯರ್ಸ್, ಹಿಂದುಸ್ತಾನ್ ಸ್ಟೀಲ್ ವರ್ಕ್ಸ್, ಜಿಂದಾಲ್ ಕಂಪನಿ ಸಿಬ್ಬಂದಿ ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ, ಎಲ್ಲ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.