ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು 40.84 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ 5.44 ಕೋಟಿ ರೂ. ಮೊತ್ತದ ಚರಾಸ್ತಿ ಹಾಗೂ 35.40 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಸೇರಿದೆ.
ಈ ವೇಳೆ ಒಟ್ಟು 40.84 ಕೋಟಿ ರೂಪಾಯಿ ಮೊತ್ತದ ಆಸ್ತಿ ಘೋಷಿಸಿದ್ದಾರೆ. ಹಾಲಿ ಸಂಸದ ಪ್ರಜ್ವಲ್.ರೇವಣ್ಣ ಪುತ್ರನ ಬಳಿ 31 ಹಸು, 4 ಹೋರಿ, 20 ಕೃಷಿ ಭೂಮಿ, 3 ಕೃಷಿಯೇತರ ಭೂಮಿ ಇದ್ದು,ತಮ್ಮ ಅಜ್ಜಿಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ 23 ಲಕ್ಷ ರೂ. ಸಾಲ ನೀಡಿದ್ದಾರೆ ಎಂದು ಆಫೀಡಿವೇಟ್ ಅಲ್ಲಿ ಸಲ್ಲಿಸಿದ್ದಾರೆ.
“ಇತರರನ್ನ ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ” : ‘CJI’ಗೆ ವಕೀಲರ ಪತ್ರಕ್ಕೆ ‘ಪ್ರಧಾನಿ ಮೋದಿ’ ಪ್ರತಿಕ್ರಿಯೆ
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಪ್ರಜ್ವಲ್ ರೇವಣ್ಣ ಮೇಲೆ ಯಾವುದೇ ಪ್ರಕರಣಗಳಿಲ್ಲ. ತಮ್ಮ ಕೈಯಲ್ಲಿ 9.29 ಲಕ್ಷ ರೂ. ಹಣವಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ಹೂಡಿಕೆ, ನೀಡಿದ ಸಾಲ, ವಾಹನಗಳ ಮೌಲ್ಯ ಸೇರಿ ಒಟ್ಟು 5.44 ಕೋಟಿ ರೂ. ಮೊತ್ತದ ಚರಾಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
BREAKING : ಏಕನಾಥ್ ಶಿಂಧೆ ‘ಶಿವಸೇನೆ’ಗೆ ಬಾಲಿವುಡ್ ‘ನಟ ಗೋವಿಂದಾ’ ಸೇರ್ಪಡೆ
ಪ್ರಜ್ವಲ್ ರೇವಣ್ಣ 2018-19ರಲ್ಲಿ ತಮ್ಮ ಸಾಮಾನ್ಯ ಆದಾಯ 6.48 ಲಕ್ಷ ರೂ. ಹಾಗೂ ಕೃಷಿ ಆದಾಯ 26.98 ಲಕ್ಷ ರೂ. ಎಂದು ಘೋಷಿಸಿದ್ದಾರೆ. 2022-23ರಲ್ಲಿ 36.14 ಲಕ್ಷ ರೂ. ಸಾಮಾನ್ಯ ಆದಾಯ ಹಾಗೂ 42.41 ಲಕ್ಷ ರೂ. ಕೃಷಿ ಆದಾಯ ಗಳಿಸಿರುವುದಾಗಿ ಮತ್ತು 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, 67.26 ಲಕ್ಷ ರೂ. ಮೌಲ್ಯ 1.1 ಕೆಜಿ ಚಿನ್ನ, 17.48 ಲಕ್ಷ ರೂ. ಮೌಲ್ಯದ 23 ಕೆಜಿ ಬೆಳ್ಳಿ, 1.04 ಲಕ್ಷ ರೂ. ಮೌಲ್ಯದ ಪಿಸ್ತೂಲ್, 2.68 ಲಕ್ಷ ರೂ. ಮೌಲ್ಯದ ರೈಫಲ್ ಕೂಡ ಪ್ರಜ್ವಲ್ ಬಳಿ ಇದೆ.ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.