ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ಬಿಜೆಪಿ ಸಂಕಲ್ಪ ಸಮಾವೇಶ ಅದ್ಧೂರಿಯಾಗಿ ನಡೆಯುತ್ತಿದೆ. ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಭಾಷಣದಲ್ಲಿ ಮಾತನಾಡಿ, ಪ್ರಜಾಭುತ್ವದಲ್ಲಿ ಜನಶಕ್ತಿ ಮುಂದೆ ಯಾವುದನ್ನು ತಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರಿಗೆ ಹಳದಿ ಕಣ್ಣು ಇವೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿ ಸೇರಿರುವ ಜನಸಮೂಹವನ್ನು ಸಿದ್ದರಾಮಯ್ಯ ನೋಡಲಿ. ನಮ್ಮ ಜನ ಶಕ್ತಿ ಇದೆ ಎಂದು ಗೊತ್ತಾಬೇಕಿದೆ ಎಂದರು.ಇನ್ನು 32 ಲಕ್ಷ ರೈತರಿಗೆ 20 ಸಾವಿರ ಕೋಟಿಗಿಂತ ಹೆಚ್ಚು ಸಾಲ ನೀಡಿದ್ದೇವೆ. ಕಡೂರು ಕ್ಷೇತ್ರದ ಅಭಿವೃದ್ಧಿಗೆ 2,800 ಕೋಟಿ ಅನುದಾನ ನೀಡಿದ್ದೇವೆ ಎಂದರು.
ಅಂದಹಾಗೆ ಸಿದ್ದರಾಮಣ್ಣ ಮೈಸೂರಿನಲ್ಲಿ ಒಂದು ಮಾತು ಹೇಳಿದ್ದರು. ನನ್ನ ಮುಖ್ಯಮಂತ್ರಿ ಮಾಡಬೇಕಂದ್ರೆ ಕಾಂಗ್ರೆಸ್ ವೋಟ್ ಹಾಕಿ ಎಂದು ಹೇಳಿದ್ದರು. ಜನರ ಬೆಂಬಲ ಆಮೇಲೆ ಇರಲಿ, ಡಿಕೆಶಿ ಬೆಂಬಲ ಕೊಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ನಿಮ್ಮನ್ನ ಸಿಎಂ ಅಂತಾ ಒಪ್ಪಿಕೊಳ್ತಾರಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹಗರಣವಾಗಿರುವುದು ಜನ ಮರೆತಿಲ್ಲ. ಅನ್ನಭಾಗ್ಯ ಯೋಜನೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಹಗರಣಗಳಾಗಿವೆ. ಅಹಿಂದಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.