ಕಾರವಾರ: ಹೆಂಡತಿಯ ಖಾತೆಗೆ 2.70 ಕೋಟಿ ರೂ. ಹಣ ವರ್ಗಾವಣೆ ಮಾಡಿ ಬ್ಯಾಂಕ್ ಆಫ್ ಬರೋಡಾ ಸಹಾಯಕ ವ್ಯವಸ್ಥಾಪಕನೊಬ್ಬ ಪರಾರಿಯಾಗಿರುವ ಘಟನೆ ಬ್ಯಾಂಕ್ ಆಫ್ ಬರೋಡಾ ಯಲ್ಲಾಪುರ ಶಾಖೆಯಲ್ಲಿ ನಡೆದಿದೆ. ಬ್ಯಾಂಕ್ ಆಫ್ ಬರೋಡಾ ಯಲ್ಲಾಪುರ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಅನಂತಪೂರ್ ಮೂಲದ ಕುಮಾರ ಬೋನಾಲ ತಮ್ಮ ಪತ್ನಿ ರೇವತಿ ಗೊರ್ರೆಯ ಖಾತೆಗೆ ಬ್ಯಾಂಕ್ನಿಂದ ಅಕ್ರಮವಾಗಿ 2.70 ಕೋಟಿ ರೂ. ಹಣ ವರ್ಗಾವಣೆ ಮಾಡಿ ವಂಚನೆ ಮಾಡಿ ಪರಾರಿಯಾಗಿದ್ದಾನೆ.
ಈ ನಡುವೆ ಘಟನೆ ಸಂಬಂಧ ಈ ಕುರಿತು ಶಾಖಾ ವ್ಯವಸ್ಥಾಪಕರು ಆರೋಪಿ ವಿರುದ್ದ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಸಲಾಗುತ್ತಿದೆ ಅಂತ ತಿಳಿದು ಬಂದಿದೆ.