ಬೆಂಗಳೂರು : ಸಾರಿಗೆ ಬಸ್ಗಳಲ್ಲಿ ಟಿಕೆಟ್ ಪ್ರಯಾಣದ ದರ ಶೇಕಡ 15 ರಷ್ಟು ಏರಿಸಿದಕ್ಕಾಗಿ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಚಿವರ ಅಮಲಿಂಗ ರೆಡ್ಡಿ ಆರ್ ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಬೆಲೆ ಏರಿಕೆ ಮಾಡಿದ್ದನ್ನು ದಾಖಲೆ ಸಮೇತ ಪಟ್ಟಿ ರಿಲೀಸ್ ಮಾಡಿದರು. ಇದೀಗ ಆರ್ ಅಶೋಕ್ ನನ್ನ ಅವಧಿಯಲ್ಲಿ ಸಾರಿಗೆ ಇಲಾಖೆ 1500 ಕೋಟಿ ರೂಪಾಯಿ ಲಾಭದಲ್ಲಿತ್ತು ಎಂದು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕ ಹಾಗೆ ನಮಗೆ ಅಧಿಕಾರ ಸಿಕ್ಕಿತ್ತು. ನಮಗೆ ಎಂಟುವರೇ ವರ್ಷಗಳ ಕಾಲ ಮಾತ್ರ ಅಧಿಕಾರ ಸಿಕ್ಕಿತ್ತು. ನಾನು ಸಾರಿಗೆ ಸಚಿವ ಆದಾಗ ಯಾವತ್ತೂ ಸಾರಿಗೆ ಇಲಾಖೆ ಲಾಸ್ ಇರಲಿಲ್ಲ. ಇಲಾಖೆ 1500ಕೋಟಿ ಲಾಭದಲ್ಲಿತ್ತು ಎಂದು ಸಚಿವ ರಾಮಲಿಂಗಾರೆಡ್ಡಿಗೆ ವಿಪಕ್ಷ ನಾಯಕ ಅಶೋಕ್ ಇದೀಗ ತಿರುಗೇಟು ನೀಡಿದ್ದಾರೆ.
ದೇಶವನ್ನು 60 ವರ್ಷ ಆಳಿದವರು ಕಾಂಗ್ರೆಸ್ನವರು. ನಮಗೆ ಎಂಟುವರೆ ವರ್ಷ ಮಾತ್ರ ಅಧಿಕಾರ ಸಿಕ್ಕಿತ್ತು. ನಾವು ಬೆಲೆ ಏರಿಸಿದಾಗಲೂ ಕೂಡ ಇಲಾಖೆ ಲಾಸ್ ಅಲ್ಲಿ ಇಟ್ಟಿರಲಿಲ್ಲ. ಸಾವಿರಾರು ಕೋಟಿ ಲಾಭದಲ್ಲಿತ್ತು. ನಾನು ಇಲಾಖೆ ಬಿಟ್ಟು ಹೋಗಬೇಕಾದರೆ ಸಾರಿಗೆ ಇಲಾಖೆ 1,500 ಕೋಟಿ ಲಾಭದಲ್ಲಿ ಇತ್ತು. ಸದ್ಯ ಈಗಲೂ ಇಲಾಖೆ ಹಾಗೆ ಇದೆಯಾ? ಒಂದು ವೇಳೆ ಲಾಭದಲ್ಲಿ ಇದ್ದರೆ ದಾಖಲೆ ತೋರಿಸಲಿ ಎಂದು ಆರ್ ಅಶೋಕ್ ಸಚಿವ ರಾಮಲಿಂಗಾರೆಡ್ಡಿಗೆ ಸವಾಲು ಹಾಕಿದರು.