Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೈಬರ್ ಕಿರುಕುಳಕ್ಕೆ ಬ್ರೇಕ್: ಅನಾಮಧೇಯ ದೂರುಗಳನ್ನೂ ನಿರ್ಲಕ್ಷಿಸಬೇಡಿ! ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಆದೇಶ!

03/04/2026 6:52 AM

ಇರಾನ್ ಮೇಲೆ ಅಮೆರಿಕದ ವಾಯುದಾಳಿ: ಬೃಹತ್ ಸೇತುವೆ ಧ್ವಂಸ, ಎಂಟು ಸಾವು; “ಇದು ಕೇವಲ ಆರಂಭವಷ್ಟೇ” ಎಂದು ಗುಡುಗಿದ ಡೊನಾಲ್ಡ್ ಟ್ರಂಪ್!

03/04/2026 6:46 AM

ಕಾಲಿನಲ್ಲಿ ಕಾಣಿಸಿಕೊಳ್ಳುವ`ಆಣಿ’ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ.! ತಪ್ಪದೇ ಹೀಗೆ ಮಾಡಿ

03/04/2026 6:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ಕೃಷಿ ನವೋದ್ಯಮಗಳಿಗೆ 14 ಕೋಟಿ ಬಿಡುಗಡೆ: ಸಚಿವ ಎನ್.ಚಲುವರಾಯಸ್ವಾಮಿ
KARNATAKA

ರಾಜ್ಯ ಸರ್ಕಾರದಿಂದ ಕೃಷಿ ನವೋದ್ಯಮಗಳಿಗೆ 14 ಕೋಟಿ ಬಿಡುಗಡೆ: ಸಚಿವ ಎನ್.ಚಲುವರಾಯಸ್ವಾಮಿ

By kannadanewsnow0920/02/2025 5:38 PM

ಬೆಂಗಳೂರು: ರಾಜ್ಯ ಸರ್ಕಾರ ಕೃಷಿ ನವೋದ್ಯಮಗಳಿಗೆ ರೂ.14 ಕೋಟಿ ಬಿಡುಗಡೆ ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ಕೃಷಿಕರ ಉತ್ಪಾದನೆ ಹೆಚ್ಚಳ ಹಾಗೂ ಉತ್ಪನ್ನಗಳ ಮೌಲ್ಯವರ್ಧನೆಗೆ ಅನುಕೂಲವಾಗಲಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ನಗರದ ಬಹುಮಹಡಿಗಳ ಕಟ್ಟಡದ ಐಟಿ ,ಬಿಟಿ ಸಭಾಂಗಣಲ್ಲಿಂದು ಕೃಷಿ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಅಗ್ರಿ ಸ್ಟಾರ್ಟ್ ಅಪ್ ಉದ್ದಿಮೆದಾರರೊಂದಿಗೆ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ನವೋದ್ಯಮಗಳು ಪ್ರಾರಂಭವಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಕೃಷಿ ಇಲಾಖೆ ವತಿಯಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಕೃಷಿ ನವೋದ್ಯಮ ಅನುಷ್ಠಾನಗೊಂಡಿದ್ದು, ನವೋದ್ಯಮಗಳಿಗೆ ರೂ.808 ಲಕ್ಷಗಳ ಅನುದಾನ ವೆಚ್ಚ ಮಾಡಲಾಗಿದೆ. ರೂ.678 ಲಕ್ಷಗಳ ಬ್ಯಾಂಕ್ ಸಾಲಗಳ ಮೂಲಕ ಒದಗಿಸಲಾಗಿದೆ ಎಂದು ಚಲುವರಾಯಸ್ವಾಮಿ ಮಾಹಿತಿ ನೀಡಿದರು.

ಕೃಷಿಯಲ್ಲಿನ ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಗಳಿಂದ ಕೃಷಿಯಲ್ಲಿ ನವೋದ್ಯಮಗಳನ್ನು ಪ್ರಾರಂಭಿಸಿ ಕೃಷಿ ವಲಯದಲ್ಲಿ ಉದ್ಯಮಶೀಲತೆ ಹೆಚ್ಚಿಸುವುದು, ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಪ್ರಗತಿಪರ ರೈತರು ಕೃಷಿಯಲ್ಲಿ ನವೋದ್ಯಮ ಪ್ರಾರಂಭಿಸಲು ಸಹಾಯ ನೀಡಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಜನೆ ಮಾಡುವುದು ಕೃಷಿ ಇಲಾಖೆ ಆಶಯವಾಗಿದೆ ಎಂದು ಅವರು ಹೇಳಿದರು.

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಇತರೆ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಲಾದ ನೂತನ ಆವಿಷ್ಕಾರಗಳು ಹಾಗೂ ತಾಂತ್ರಿಕತೆಗಳ ವಾಣಿಜ್ಯಕರಣವನ್ನು ಉತ್ತೇಜಿಸಲು ಕೃಷಿ ಇಲಾಖೆಯಿಂದ ಕ್ರಮವಹಿಸಲಾಗುತ್ತಿದೆ. ಕೃಷಿ ನವೋದ್ಯಮಿಗಳು ಇದರ ಲಾಭ ಪಡೆದು ರೈತರಿಗೂ ಅನುಕೂಲಗಳನ್ನು ವರ್ಗಾಯಿಸಬೇಕೆಂದು ಕೃಷಿ ಸಚಿವರು ಕರೆ ನೀಡಿದರು.

ಇದೇ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಐಟಿ ,ಬಿಟಿ ಇಲಾಖೆ ವತಿಯಿಂದಲೂ ಅಗ್ರಿಸ್ಟಾರ್ಟ್ ಅಪ್ ಗಳಿಗೆ ಹೆಚ್ಚಿನ ನೆರವು ಹಾಗೂ ಮಾರುಕಟ್ಟೆ ಪ್ರೋತ್ಸಾಹಕ್ಕೆ ಸಹಾಯ ಒದಗಿಸಲಾಗುತ್ತಿದೆ ಎಂದರು.

ಕೃಷಿ ವಲಯ ಬಲವರ್ಧನೆಗೊಂಡರೆ ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಶಕ್ತಿ ಬರಲಿದೆ ಜೊತೆಗೆ ಭೂಮಿಯ ಫಲವತ್ತತೆ ನಿರ್ವಹಣೆ ಅಧಿಕ ಲಾಭಗಳಿಕೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಕೃಷಿ ನವೋದ್ಯಮಿಗಳು ತಾವು ಪ್ರಾರಂಭಿಸಿರುವ ಹೊಸ ಸಂಸ್ಥೆಗಳ ಕಾರ್ಯವೈಖರಿಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. 40ಕ್ಕೂ ಹೆಚ್ಚು ನವೋದ್ಯಮಿಗಳು / ಸಂಸ್ಥೆಗಳು ಪಾಲ್ಗೊಂಡು ಸರ್ಕಾರದಿಂದ ಪಡೆದಿರುವ ಸೌಲಭ್ಯ ಹಾಗೂ ವಿಸ್ತರಣೆಗೆ ಅಗತ್ಯವಿರುವ ನೆರವಿನ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು.

ಐಟಿ ಬಿಟಿ ಕಾರ್ಯದರ್ಶಿ ಏಕ್ರೂಪ್ ಕೌರ್, ಕೃಷಿ ಇಲಾಖೆ ಕಾರ್ಯದರ್ಶಿ ಡಾ|| ರವಿಶಂಕರ್, ಆಯುಕ್ತರಾದ ವೈ.ಎಸ್.ಪಾಟೀಲ್, ನಿರ್ದೇಶಕರಾದ ಡಾ||ಪುತ್ರ, ಜಲಾನಯನ ಆಯುಕ್ತರಾದ ಮಹೇಶ ಬಿ ಶಿರೂರ, ನಿರ್ದೇಶಕರಾದ ಬಂಥನಾಳ ಮತ್ತಿತರರು ಉಪಸ್ಥಿತರಿದ್ದರು.

ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಯಶವಂತಪುರ ನಡುವೆ ವಿಶೇಷ ರೈಲುಗಳ ಸೇವೆ ವಿಸ್ತರಣೆ

ರಾಜ್ಯದಲ್ಲಿ ಫೆಬ್ರವರಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು, ಏಪ್ರಿಲ್-ಮೇನಲ್ಲಿ ಉತ್ತಮ ಮಳೆ ಸಾಧ್ಯತೆ

Share. Facebook Twitter LinkedIn WhatsApp Email

Related Posts

ಕಾಲಿನಲ್ಲಿ ಕಾಣಿಸಿಕೊಳ್ಳುವ`ಆಣಿ’ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ.! ತಪ್ಪದೇ ಹೀಗೆ ಮಾಡಿ

03/04/2026 6:45 AM2 Mins Read

ALERT : `ಡೇಟಿಂಗ್ ಆ್ಯಪ್‌’ ಬಳಸುವವರೇ ಎಚ್ಚರ : ಮದುವೆ ಆಮಿಷವೊಡ್ಡಿ ಬೆಂಗಳೂರಿನ ಟೆಕ್ಕಿಗೆ 18.25 ಲಕ್ಷ ರೂ. ಪಂಗನಾಮ ಹಾಕಿದ ‘ಮಾಯಾಂಗನೆ’.!

03/04/2026 6:40 AM2 Mins Read

`ಗೃಹ ಜ್ಯೋತಿ ಯೋಜನೆ’ ಸೌಲಭ್ಯ ಪಡೆಯಲು ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

03/04/2026 6:35 AM2 Mins Read
Recent News

ಸೈಬರ್ ಕಿರುಕುಳಕ್ಕೆ ಬ್ರೇಕ್: ಅನಾಮಧೇಯ ದೂರುಗಳನ್ನೂ ನಿರ್ಲಕ್ಷಿಸಬೇಡಿ! ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಆದೇಶ!

03/04/2026 6:52 AM

ಇರಾನ್ ಮೇಲೆ ಅಮೆರಿಕದ ವಾಯುದಾಳಿ: ಬೃಹತ್ ಸೇತುವೆ ಧ್ವಂಸ, ಎಂಟು ಸಾವು; “ಇದು ಕೇವಲ ಆರಂಭವಷ್ಟೇ” ಎಂದು ಗುಡುಗಿದ ಡೊನಾಲ್ಡ್ ಟ್ರಂಪ್!

03/04/2026 6:46 AM

ಕಾಲಿನಲ್ಲಿ ಕಾಣಿಸಿಕೊಳ್ಳುವ`ಆಣಿ’ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ.! ತಪ್ಪದೇ ಹೀಗೆ ಮಾಡಿ

03/04/2026 6:45 AM

ಭಾರತೀಯ ಕಲೆಗೆ ಜಾಗತಿಕ ಮನ್ನಣೆ: ದಾಖಲೆಯ 150 ಕೋಟಿ ರೂ.ಗೆ ಮಾರಾಟವಾದ ರಾಜಾ ರವಿವರ್ಮನ ‘ಯಶೋದಾ ಮತ್ತು ಕೃಷ್ಣ’ ಪೇಂಟಿಂಗ್!

03/04/2026 6:43 AM
State News
KARNATAKA

ಕಾಲಿನಲ್ಲಿ ಕಾಣಿಸಿಕೊಳ್ಳುವ`ಆಣಿ’ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ.! ತಪ್ಪದೇ ಹೀಗೆ ಮಾಡಿ

By kannadanewsnow5703/04/2026 6:45 AM KARNATAKA 2 Mins Read

ಬೆಂಗಳೂರು: ಕಾಲಿನಲ್ಲಿ ಕಾಣಿಸಿಕೊಳ್ಳುವ ‘ಆಣಿ’ (Foot Corns) ಮೇಲ್ನೋಟಕ್ಕೆ ಒಂದು ಸಣ್ಣ ಸಮಸ್ಯೆಯಂತೆ ಕಂಡರೂ, ಇದು ದೈನಂದಿನ ಚಟುವಟಿಕೆಗಳಿಗೆ ದೊಡ್ಡ…

ALERT : `ಡೇಟಿಂಗ್ ಆ್ಯಪ್‌’ ಬಳಸುವವರೇ ಎಚ್ಚರ : ಮದುವೆ ಆಮಿಷವೊಡ್ಡಿ ಬೆಂಗಳೂರಿನ ಟೆಕ್ಕಿಗೆ 18.25 ಲಕ್ಷ ರೂ. ಪಂಗನಾಮ ಹಾಕಿದ ‘ಮಾಯಾಂಗನೆ’.!

03/04/2026 6:40 AM

`ಗೃಹ ಜ್ಯೋತಿ ಯೋಜನೆ’ ಸೌಲಭ್ಯ ಪಡೆಯಲು ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

03/04/2026 6:35 AM

ರಾಜ್ಯದ `SSLC’ ಮೌಲ್ಯಮಾಪಕರಿಗೆ ಗುಡ್ ನ್ಯೂಸ್ : ಗೌರವಸಂಭಾವನೆ ಶೇ.5% ಹೆಚ್ಚಳ.!

03/04/2026 6:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.