ಬೆಂಗಳೂರು: ನಿನ್ನೆ ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇಂದು ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ.
ಎಇ ಜಗದೀಶ್ ಬಳಿಯಲ್ಲಿ ವಿಧಾನಸೌಧದಲ್ಲಿ ಪೊಲೀಸರು ತಪಾಸಣೆ ನಡೆಸುವಂತ ಸಂದರ್ಭದಲ್ಲಿ ನಿನ್ನೆ 10.5 ಲಕ್ಷ ನಗದು ಪತ್ತೆಯಾಗಿತ್ತು. ವಿಧಾನಸೌಧ ಪೊಲೀಸರು ಆ ಹಣವನ್ನು ಜಪ್ತಿ ಮಾಡಿ, ಸೂಕ್ತ ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಇಂದು ವಿಧಾನಸೌಧ ಪೊಲೀಸ್ ಠಾಣೆಯ ವಿಚಾರಣಾಧಿಕಾರಿಯ ಮುಂದೆ ತಮ್ಮ ವಕೀಲರೊಂದಿಗೆ ಹಾಜರಾದಂತ ಎಇ ಜಗದೀಶ್, ಪತ್ತೆಯಾದಂತ 10.5 ಲಕ್ಷ ನಗದು ಸಂಬಂಧ ಸರಿಯಾದ ಸಮರ್ಪಕ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಅವರನ್ನು ವಿಧಾನಸೌಧ ಪೊಲೀಸರು ಬಂಧಿಸಿರೋದಾಗಿ ತಿಳಿದು ಬಂದಿದೆ.
ನಿಜವಾಗ್ತಿದೆ ವೀರ ಬ್ರಹ್ಮೇಂದ್ರ ‘ಕಾಲಜ್ಞಾನ’ ; ಹುಣಸೆ ಮರದಿಂದ ‘ಹೆಂಡ’ ಸೋರಿಕೆ, ವಿಸ್ಮಯ ನೋಡಲು ಮುಗಿಬಿದ್ದ ಜನ
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ – ನಿತಿನ್ ಗಡ್ಕರಿ