ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ 9000 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್ 9 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಆರ್ಆರ್ಬಿ ವೆಬ್ಸೈಟ್ ಮೂಲಕ ಅರ್ಜಿಗಳನ್ನ ಸಲ್ಲಿಸಬಹುದು. ವಿವರವಾದ ಖಾಲಿ ಹುದ್ದೆಗಳನ್ನು ಮಾರ್ಚ್ 9 ರಂದು ಆರ್ಆರ್ಬಿಯ ಎಲ್ಲಾ ವೆಬ್ಸೈಟ್ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಹುದ್ದೆಗಳ ವಿವರ : 9000 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ನಡೆಸಲಾಗುತ್ತಿದ್ದು, ಇದರಲ್ಲಿ 1100 ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಮತ್ತು 7900 ಟೆಕ್ನಿಷಿಯನ್ ಗ್ರೇಡ್ 3 ಸಿಗ್ನಲ್ ಹುದ್ದೆಗಳು ಸೇರಿವೆ.
ವಯಸ್ಸಿನ ಮಿತಿ : ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 18 ರಿಂದ 36 ವರ್ಷಗಳು ಮತ್ತು ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 18 ರಿಂದ 33 ವರ್ಷಗಳ ನಡುವೆ ಇರಬೇಕು.
ಅರ್ಜಿ ಶುಲ್ಕ : ಎಸ್ಸಿ / ಎಸ್ಟಿ, ಮಾಜಿ ಸೈನಿಕರು, ಅಂಗವಿಕಲರು, ಮಹಿಳೆಯರು, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಅರ್ಜಿ ಶುಲ್ಕ 250 ರೂಪಾಯಿ. ಇನ್ನು ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂಪಾಯಿ ಆಗಿದೆ.
ಶೈಕ್ಷಣಿಕ ಅರ್ಹತೆ : ವಿವರವಾದ ಶೈಕ್ಷಣಿಕ ಅರ್ಹತೆಗಳನ್ನು ಅಧಿಕೃತ ಆರ್ಆರ್ಬಿ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
Income Tax : 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ರೂ ‘ತೆರಿಗೆ ಪಾವತಿ’ಸುವ ಅಗತ್ಯವಿಲ್ಲ ; ಅದ್ಹೇಗೆ ಗೊತ್ತಾ.?
BIG Alert: ನೀವು ‘ಹೆಲ್ಮೆಟ್’ ಹಾಕದೇ ‘ಬೈಕ್’ ಓಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ
BREAKING : 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ‘ಸಾಹಿತಿ ಗುಲ್ಜಾರ್, ಜಗದ್ಗುರು ರಾಮಭದ್ರಾಚಾರ್ಯ’ ಆಯ್ಕೆ