ಬೆಂಗಳೂರು : ಬೆಂಗಳೂರಲ್ಲಿ ವಿಚಾರಣೆಗೆ ಎಂದು ಬಂದಿದ್ದ ರೌಡಿಶೀಟರ್ ಗೆ ಕೋರ್ಟ್ ಅವರಣದಲ್ಲೇ ಲಾಂಗ್ ತೋರಿಸಿ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ನಡೆದಿದೆ.
ರೌಡಿಶೀಟರ್ ಜಾಲಮಂಗಲ ಅಭಿ ಎಂಬಾತನಿಂದ ಬೆದರಿಕೆ ಹಾಕಲಗಿದ್ದು, ಹಾರೋಹಳ್ಳಿ ಮೂಲದ ಉದಯ್ ಗೆ ರೌಡಿಶೀಟರ್ ಬೆದರಿಕೆ ಹಾಕಿದ್ದಾನೆ. ಅಭಿ ಹಾಗು ಅಭಿಷೇಕ್ ಎಂಬುವವರ ಬಂಧನವಾಗಿದ್ದು, ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








