ಬೆಂಗಳೂರು: ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗದೀಶ್ ಆಲಿಯಾಸ್ ಜಗ್ಗ ಆಗಿದ್ದನು. ಈಗಾಗಲೇ ಆತನನ್ನು ಬಂಧಿಸಿರುವಂತ ಪೊಲೀಸರು, ಇದೀಗ ಮತ್ತೆ ಜಗ್ಗನ ವಿರುದ್ಧ ರೌಡಿ ಶೀಟ್ ಓಪನ್ ಮಾಡಿದ್ದಾರೆ.
ಬೆಂಗಳೂರಿನ ಭಾರತಿನಗರ ಪೊಲೀಸರಿಂದ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಜಗದೀಶ್ ಆಲಿಯಾಸ್ ಜಗ್ಗನ ವಿರುದ್ಧ ಮತ್ತೆ ರೌಡಿಶೀಟ್ ಓಪನ್ ಮಾಡಿದ್ದಾರೆ.
ಅಪರಾಧ ಪ್ರಕರಣಗಳ ಹಿನ್ನಲೆಯನ್ನು ಜಗದೀಶ್ ಹೊಂದಿದ್ದರು. ಬಿಜೆಪಿ ಶಾಸಕ ಭೈರತಿ ಬಸವರಾಜ್ ಪ್ರಭಾವ ಬಳಕೆ ಮಾಡಿ ರೌಡಿಪಟ್ಟಿಯಿಂದ ತೆಗೆಯಲಾಗತ್ತು ಎನ್ನಲಾಗುತ್ತಿದೆ. 2023ರ ಸೆಪ್ಟೆಂಬರ್ ನಲ್ಲಿ ರೌಡಿಪಟ್ಟಿಯಿಂದ ಕೈಬಿಡಲಾಗಿತ್ತು.
ಇದೀಗ ಬಿಕ್ಲು ಶಿವ ಕೊಲೆ ಕೇಸಲ್ಲಿ ಪ್ರಮುಖ ಆರೋಪಿಯಾದ ಕಾರಣ, ಈ ಹಿಂದೆಯೂ ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಭಾರತಿನಗರ ಪೊಲೀಸರು ಜಗದೀಶ್ ಆಲಿಯಾಸ್ ಜಗ್ಗನ ವಿರುದ್ಧ ಮತ್ತೆ ರೌಡಿಶೀಟ್ ಓಪನ್ ಮಾಡಿದ್ದಾರೆ.