ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದು, ಈ ವೇಳೆ ಸ್ಪೋಟಕ ಸಂಗತಿಗಳು ಬಯಲಾಗಿದೆ ಎಂದು ತಿಳಿದುಬಂದಿದೆ.
ಬಿಕ್ಲು ಶಿವನನ್ನು ಎತ್ತಲು ಗ್ಯಾಂಗ್ ಕಾರು ಖರೀದಿ ಮಾಡಿತ್ತು. ಎರಡುವರೆ ಲಕ್ಷ ಕೊಟ್ಟು ಸ್ಕಾರ್ಪಿಯೋ ಕಾರನ್ನು ಖರೀದಿಸಿ ಸುತ್ತಾಟ ನಡೆಸಿದ್ದರು. ಈ ಕಾರನ್ನು ಕನ್ನಡಪರ ಹೋರಾಟಗಾರ ಆರ್ಡಿ ಅನಿಲ್ ಕೊಡಿಸಿದ್ದು ಎನ್ನಲಾಗಿದ್ರ್. ಫೆಬ್ರವರಿ ಇಂದ ಶಿವನ ಚಲನವಲನವನ್ನು ಆರೋಪಿಗಳು ಗಮನಿಸುತ್ತಿದ್ದರು.
ಬಿಕ್ಲು ಶಿವನನ್ನು ಮುಗಿಸಲು ಆರೋಪಿಗಳು ಭಯಾನಕ ಸ್ಕೆಚ್ ಹಾಕಿದ್ದರು. ಆತನನ್ನು ಗಮನಿಸಲು ಇಬ್ಬರನ್ನು ದಿನವೊಂದಕ್ಕೆ 1 ಸಾವಿರ ಕೊಟ್ಟು ಇಬ್ಬರನ್ನು ಅಬ್ಬಸರ್ವ್ ಮಾಡಲು ಬಿಟ್ಟಿದ್ದರು. ಆದರೆ ಒಬ್ಬ ಮಾಡುತ್ತಿರುವ ಕೆಲಸ ಮತ್ತೊಬ್ಬನಿಗೆ ಗೊತ್ತೇ ಇರಲಿಲ್ಲ.
ಇನ್ನು ಪೊಲೀಸರು ಮತ್ತೊಂದು ವಿಷಯ ಪತ್ತೆ ಮಾಡಿದ್ದು, ಶಿವು ಹತ್ಯೆಯ ಹಿಂದಿನ ದಿನ ಮತ್ತೊಂದು ಕಾರಣ ಪತ್ತೆ ಹಚ್ಚಿದ್ದಾರೆ. ಅದೊಂದು ಜಗಳದಿಂದ ಬಿಕ್ಲು ಶಿವನಿಗೆ ಜಗ್ಗ ಮುಹೂರ್ತ ಇಟ್ಟಿದ್ದ ಎನ್ನಲಾಗಿದೆ. ಜಗ್ಗನ ಬಗ್ಗೆ ಶಿವು ಫೇಸ್ಬುಕ್ನಲ್ಲಿ ಪದೇಪದೇ ಬೈಯುತ್ತಿದ್ದ ಎಂದು ತಿಳಿದುಬಂದಿದೆ. ಜಗ್ಗ ಮಾಡುವ ಕೆಲಸಗಳ ಬಗ್ಗೆ ಶಿವು ಕೆಟ್ಟದಾಗಿ ಮಾತನಾಡುತ್ತಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.