ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಮೆಲ್ಬೋರ್ನ್ನಲ್ಲಿ ನಡೆಯುತ್ತಿದೆ. ಸೂಪರ್ -12 ಹಂತದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ ಈ ನಡುವೆ ಟೀಮ್ ಇಂಡಿಯಾದ ಕಪ್ತಾನ ರೋಹಿತ್ ಶರ್ಮಾಗೆ ಇದು ಸ್ಮರಣೀಯ ಕ್ಷಣವಾಗಿದೆ. ಹೌದು, ಇಂದು ರೋಹಿತ್ ಶರ್ಮಾ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ, ಈ ಸಮಯದಲ್ಲಿ ಅವರು ಸಹ ಭಾವುಕರಾದ ಸನ್ನಿವೇಶ ಕಂಡು ಬಂದಿದೆ.
ಪಂದ್ಯಕ್ಕೂ ಮುನ್ನ, ಎರಡೂ ತಂಡಗಳು ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾಗ, ಆಟಗಾರರು ಮೆಲ್ಬೋರ್ನ್ನಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ನಿಂತಿದ್ದರು. ಭಾರತದ ರಾಷ್ಟ್ರಗೀತೆ ಬಂದಾಗ, ಟೀಮ್ ಇಂಡಿಯಾದ ಎಲ್ಲಾ ಆಟಗಾರರು ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು, ಅದು ಮುಗಿಯುವ ಹಂತದಲ್ಲಿದ್ದಂತೆಯೇ, ರೋಹಿತ್ ಶರ್ಮಾ ಭಾವುಕರಾದರು ಮತ್ತು ತಮ್ಮನ್ನು ತಾವು ನಿಭಾಯಿಸಿಕೊಳ್ಳುವುದು ಕಂಡುಬಂದಿತು.
Rohit was so emotional during the time of National Anthem.@ImRo45
🇮🇳#INDvPAK #T20worldcup22 #WorldCup2022 #RohitSharma𓃵 #RohitSharma #ViratKohli𓃵 pic.twitter.com/WHZTNTEQS2— ℛℴ𝓌𝒹𝓎ᴮᵒʸ𝓛𝓾𝓬𝓴𝔂 (@rowdyboyluckyop) October 23, 2022