ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ(Roger Binny) ಅವರು ಸೌರವ್ ಗಂಗೂಲಿ ಅವರ ನಂತ್ರ ಮುಂದಿನ ಬಿಸಿಸಿಐ ಅಧ್ಯಕ್ಷ(BCCI President)ರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿನ್ನಿ ಪ್ರಸ್ತುತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (KSCA) ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019 ರ ಅಕ್ಟೋಬರ್ನಲ್ಲಿ ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ ಅವರ ಸ್ಥಾನವನ್ನು ರೋಜರ್ ಬಿನ್ನಿ ಅಲಂಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 11 ಮತ್ತು 12 ರಂದು ನಾಮಪತ್ರಗಳನ್ನು ಭರ್ತಿ ಮಾಡಬಹುದು. ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 13 ರಂದು ನಡೆಯಲಿದೆ ಮತ್ತು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಅಕ್ಟೋಬರ್ 14 ರೊಳಗೆ ಹಿಂಪಡೆಯಬಹುದು.
BIG NEWS : ಲಘು ಯುದ್ಧ ಹೆಲಿಕಾಪ್ಟರ್ ‘ಪ್ರಚಂಡ್’ ಹಾರಾಟಕ್ಕೆ ಮಹಿಳಾ ಅಧಿಕಾರಿಗಳ ನೇಮಕ | LCH Prachand