ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚೆಸ್ ಶಾಂತ ಏಕಾಗ್ರತೆ, ತಾಳ್ಮೆ ಮತ್ತು ಕಾರ್ಯತಂತ್ರದ ಚಿಂತನೆಯೊಂದಿಗೆ ಆಡುವ ಆಟಗಳಲ್ಲಿ ಒಂದಾಗಿದೆ. ಆದರೆ ಮಾಸ್ಕೋ ಓಪನ್ನಲ್ಲಿ ಚೆಸ್ ಆಟವು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಚೆಸ್ ಆಡುವ ರೋಬೋಟ್ 7 ವರ್ಷದ ಹುಡುಗನ ಬೆರಳನ್ನು ಅಜಾಗರೂಕತೆಯಿಂದ ಹಿಡಿದು ಮುರಿದಿರವ ಘಟನೆ ನಡೆದಿದೆ.
ರಷ್ಯಾದ ಹಲವಾರು ಮಾಧ್ಯಮಗಳ ಪ್ರಕಾರ, ಸರದಿಗೆ ಕಾಯದೆ ಕ್ಷಿಪ್ರವಾಗಿ ಆಟವಾಡಿದ ಬಾಲಕನ ಬೆರಳನ್ನು ರೋಬೋಟ್ ಮುರಿದಿದೆ. ಕಳೆದ ವಾರ (ಜುಲೈ 19) ಮಾಸ್ಕೋ ಓಪನ್ನಲ್ಲಿ ಈ ಘಟನೆ ನಡೆದಿದೆ.
ಘಟನೆ ಕುರಿತಾದ ವಿಡಿಯೋದಲ್ಲಿ ಮಗುವಿನ ಬೆರಳುಗಳು ರೋನೋಟ್ನಲ್ಲಿ ಸಿಕ್ಕಿಬಿದ್ದಾಗ ಮಹಿಳೆಯೋರ್ವರು ಬಾಲಕ ರಕ್ಷಣೆಗೆ ಮುಂದಾಗುತ್ತಾರೆ. ಕೊನೆಗೆ ಮೂವರು ವ್ಯಕ್ತಿಗಳು ಒಂದಾಗಿ ಬಾಲಕನನ್ನು ರೋಬೋಟ್ನಿಂದ ರಕ್ಷಣೆ ಮಾಡಿರುವುದ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಮಾಸ್ಕೋ ಚೆಸ್ ಫೆಡರೇಶನ್ ಅಧ್ಯಕ್ಷ ಸೆರ್ಗೆಯ್ ಲಾಜರೆವ್ ಪ್ರಕಾರ, ರೋಬೋಟ್ ವಿಚಲಿತರಾಗದೆ ಈ ಹಿಂದೆ ಹಲವಾರು ಪಂದ್ಯಗಳನ್ನು ಆಡಿದೆ. ರೋಬೋಟ್ ಮಗುವಿನ ಬೆರಳನ್ನು ಮುರಿದಿದೆ. ಇದು ಖಂಡಿತವಾಗಿಯೂ ಕೆಟ್ಟದು ಎಂದು TASS ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನು ಅತ್ಯಂತ ಅಪರೂಪದ ಪ್ರಕರಣ ಎಂದು ಕರೆದ ರಷ್ಯಾದ ಚೆಸ್ ಫೆಡರೇಶನ್ನ ಉಪಾಧ್ಯಕ್ಷ ಸೆರ್ಗೆ ಸ್ಮ್ಯಾಗಿನ್, ಇದು ಅವರು ನೆನಪಿಸಿಕೊಳ್ಳಬಹುದಾದ ಮೊದಲ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
All acquisition that advanced AI will destroy humanity is false. Not the powerful AI or breaching laws of robotics will destroy humanity, but engineers with both left hands :/
On video – a chess robot breaks a kid's finger at Moscow Chess Open today. pic.twitter.com/bIGIbHztar
— Pavel Osadchuk 👨💻💤 (@xakpc) July 21, 2022
ರೋಬೋಟ್ ಆಟವಾಡಿ ಮುಗಿಸುವ ವರೆಗೆ ಕಾಯದೇ, ಬಾಲಕ ಆತುರವಾಗಿ ತನ್ನ ಆಟ ಆಡಲು ಹೋಗಿದ್ದಾನೆ. ಆದ್ದರಿಂದ ರೋಬೋಟ್ ಹುಡುಗನ ಬೆರಳನ್ನು ಮುರಿದಿದೆ. ಇದೇ ಮೊದಲ ರೀತಿ ಈ ತರ ಆಗಿದೆ. ಮಗು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ. ಇದು ಕಾಕತಾಳೀಯ ಮತ್ತು ಚೆಸ್ ರೋಬೋಟ್ ತುಂಬಾ ಸುರಕ್ಷಿತವಾಗಿದೆ. ಅಲ್ಲದೇ ಮತ್ತೊಂದು ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸುತ್ತೇವೆ ಎಂದು ರಷ್ಯಾದ ಚೆಸ್ ಫೆಡರೇಶನ್ನ ಉಪಾಧ್ಯಕ್ಷ ಸೆರ್ಗೆ ಸ್ಮ್ಯಾಗಿನ್ ಹೇಳಿದ್ದಾರೆ.
ಇತ್ತ ರೋಬೋಟ್ ನಮ್ಮ ಮಗುವನ್ನು ಹಿಡಿಯುತ್ತಿದ್ದಂತೆ, ಪಕ್ಕದಲ್ಲಿದ್ದವರು ಧಾವಿಸಿ ಅವನನ್ನು ರೋಬೋಟ್ನ ಹಿಡಿತದಿಂದ ಮುಕ್ತಗೊಳಿಸಿದರು.ನಾವು ಸ್ಥಳೀಯ ಪ್ರಾಸಿಕ್ಯೂಟರ್ಗೆ ದೂರು ನೀಡಲು ಅವರನ್ನು ಸಂಪರ್ಕಿಸುತ್ತೇವೆ ಎಂದು ಪೋಷಕರು ಹೇಳಿದ್ದಾರೆ.
ಅಲ್ಲದೇ ಲೀಗ್ ಸಂಘಟಕರೇ ಇದರ ಹೊಣೆ ಹೊರಬೇಕು. ನಮ್ಮ ಮಗುವಿಗೆ ಏನಾದ್ರೂ ತೊಂದರೆ ಆಗಿದ್ದರೆ ಏನು ಕಥೆ. ನೀವು ಸುರಕ್ಷತೆ ಬಗ್ಗೆ ಗಮನ ಕೊಡಬೇಕಿತ್ತು ಎಂದು ಆರೋಪಿಸಿದ್ದಾರೆ.
Rare Pics: ಸೂರ್ಯನ ಸುತ್ತ ಮೂಡಿ ಬಂದ ಕಾಮನಬಿಲ್ಲಿನ ವೃತ್ತ… ನೋಡಿ ಇಲ್ಲಿವೆ ಅದ್ಭುತ ಚಿತ್ರಗಳು!