ಬೆಂಗಳೂರು : ಬೆಂಗಳೂರಿನಲ್ಲಿ ಶಿವರಾತ್ರಿ ದಿನದಂದು ಮನೆ ಮಾಲೀಕರು ಜಾಗರಣೆಗೆ ತೆರಳಿದಾಗ ದರೋಡೆ ನಡೆದಿದೆ. 5 ಲಕ್ಷ ಮೌಲ್ಯ ಚೆನ್ನ ಹಾಗೂ 1 ಲಕ್ಷ ನಗದು ಹಣ ಕಳ್ಳತನ ಮಾಡಿದ್ದಾರೆ. ಬೆಂಗಳೂರು ಬನಶಂಕರಿ ಐದನೇ ಹಂತದ ಮನೆಯಲ್ಲಿ ಕಳ್ಳತನ ನಡೆದಿದೆ.
ಜಾಗರಣೆಗಾಗಿ ಮನೆಯ ಮಾಲಿಕ ಮಂಜುನಾಥ್ ನೆಂಟರ ಮನೆಗೆ ತೆರಳಿದ್ದರು. ಕುಟುಂಬದ ಸಮೇತ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು, ಕಬ್ಬಿಣದ ಸಲಕೆಯಿಂದ ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಇಲ್ಲ ಅಂತ ಕಳ್ಳತನಕ್ಕೆ ಮನೆಗೆ ಬಂದಿದ್ದಾರೆ.
ಆದರೆ ಮನೆಯ ಸಿಸಿಟಿವಿ ಕ್ಯಾಮೆರಾ ಕಂಡು ಖದಿಮರು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ ಮುಖಕ್ಕೆ ಮಾಸ್ಕ ಧರಿಸಿ ಬಂದಿದ್ದು ಸಿಸಿಟಿವಿ ಕ್ಯಾಮರಗೆ ಬಟ್ಟೆ ಕಟ್ಟಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ, ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.








