ಬಳ್ಳಾರಿ : ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಗಣತಿಯನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಕಲಬುರಗಿ ವಲಯದ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು(ಈಶಾನ್ಯ) ಮುಖ್ಯ ಇಂಜಿನಿಯರ್ ಶರಣಪ್ಪ ಸುಲಗಂಟೆ ಅವರು ತಿಳಿಸಿದ್ದಾರೆ.
2026 ನೇ ಸಾಲಿನ ರಸ್ತೆ ಸಂಚಾರ ಗಣತಿಯನ್ನು ಫೆ.26 ರ ಬೆಳಿಗ್ಗೆ 06 ಗಂಟೆಯಿಂದ ಫೆ.27ರ ಬೆಳಿಗ್ಗೆ 06 ಗಂಟೆಯವರೆಗೆ ಸತತವಾಗಿ 02 ದಿನಗಳ ಕಾಲ ನಡೆಯಲಿದೆ. ಗಣತಿಗೆ ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 370 ಗಣತಿ ಕೇಂದ್ರಗಳನ್ನು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 692 ಗಣತಿ ಕೇಂದ್ರಗಳನ್ನು, ಒಟ್ಟು 1062 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.
ಗಣತಿಯ ಮುಖ್ಯ ಉದ್ದೇಶಗಳು:
ಪ್ರತಿ ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಅಳೆಯುವುದು. ಪ್ರಸ್ತುತದಲ್ಲಿ ಇರುವ ರಸ್ತೆಗಳನ್ನು ದುರಸ್ತಿ ಪಡಿಸುವಲ್ಲಿ ಹಾಗೂ ರಸ್ತೆಯನ್ನು ಇನ್ನು ಉತ್ತಮ ಪಡಿಸಲು ಸಹಾಯಕವಾಗಲಿದೆ. ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಗಮನಿಸಿ ರಸ್ತೆಯ ಅಗಲೀಕರಣಗೊಳಿಸುವುದು. ರಸ್ತೆಗಳನ್ನು ಮೇಲ್ದರ್ಜೆಗೆರಿಸುವಲ್ಲಿ ಈ ಗಣತಿಯ ವರದಿ ಪ್ರಮುಖವಾಗಿರುತ್ತದೆ.
ರಸ್ತೆಯ ಸಂಚಾರದ ಗಣತಿಯಿಂದ ವಾಹನ ಅಪಘಾತಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ರಸ್ತೆ ಸಂಚಾರ ಗಣತಿಯಿಂದ ಆ ರಸ್ತೆ ಮೇಲೆ ಯಾವ ರೀತಿ ವಾಹನ ಸಂಚಾರ ಅಧಿಕವಾಗುತ್ತಿದೆ ಎನ್ನುವುದನ್ನು ತಿಳಿಯುವುದರಿಂದ ಹಲವಾರು ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರ ಮಟ್ಟದಲ್ಲಿ ರೂಪಿಸಲು ಅನುಕೂಲವಾಗುತ್ತದೆ.
ಸಂಚಾರ ಗಣತಿಯನ್ನು ಯಶಸ್ವಿಯಾಗಿಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಸಹಕರಿಸುವಂತೆ ಕಲಬುರಗಿ ವಲಯದ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು(ಈಶಾನ್ಯ) ಮುಖ್ಯ ಇಂಜಿನಿಯರ್ ಶರಣಪ್ಪ ಸುಲಗಂಟೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.








