ಉಡುಪಿ : ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಇಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರು ವಿನೂತನ ಪ್ರತಿಭಟನೆ ನಡೆಸಿದರು.
BIG NEWS : ಅಂಗನವಾಡಿ ಕಾರ್ಯಕರ್ತೆಯರಿಗೆ ʻಭರ್ಜರಿ ಸಿಹಿ ಸುದ್ದಿʼ ನೀಡಿದ ಸಚಿವ ಹಾಲಪ್ಪ ಆಚಾರ್
ಇಂದ್ರಾಳಿ ಬ್ರಿಡ್ಜ್ನ ಹೊಂಡ ಗುಂಡಿ ರಸ್ತೆಗೆ ತೆಂಗಿನಕಾಯಿ ಒಡೆದು ಗುಂಡಿ ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ. ಈ ರಸ್ತೆಗೆ ಟೆಂಡರ್ ಆಗಿ ಮೂರು ವರ್ಷಗಳಿಂದ ರಸ್ತೆ ಹಾಳಾದರೂ ಯಾರೂ ಪ್ರಶ್ನೆ ಮಾಡುತ್ತಿಲ್ಲ.
BIG NEWS : ಅಂಗನವಾಡಿ ಕಾರ್ಯಕರ್ತೆಯರಿಗೆ ʻಭರ್ಜರಿ ಸಿಹಿ ಸುದ್ದಿʼ ನೀಡಿದ ಸಚಿವ ಹಾಲಪ್ಪ ಆಚಾರ್
ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸ್ವತಃ ಮುಖ್ಯಮಂತ್ರಿಗಳೇ ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಕೂಡಾ ಅವರ ಕಣ್ಣಿಗೂ ಈ ರಸ್ತೆಯ ಸಮಸ್ಯೆ ಕಂಡು ಬಂದಿಲ್ಲ. ಇಲ್ಲಿನ ಹೊಂಡಗಳನ್ನು ರಿಪೇರಿ ಮಾಡಲು ಸ್ವತಃ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವಾರ್ಯತೆ ಇದೆ.
BIG NEWS : ಅಂಗನವಾಡಿ ಕಾರ್ಯಕರ್ತೆಯರಿಗೆ ʻಭರ್ಜರಿ ಸಿಹಿ ಸುದ್ದಿʼ ನೀಡಿದ ಸಚಿವ ಹಾಲಪ್ಪ ಆಚಾರ್
ಉಡುಪಿ ಜನರು ಮುಗ್ಧರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ. ಈ ರಸ್ತೆಯಲ್ಲಿ ಬೀದಿ ದೀಪ ಕೂಡಾ ಇಲ್ಲ. ಇದರಿಂದಾಗಿ ದನ ಕರುಗಳು ಸಾಯುತ್ತವೆ.
BIG NEWS : ಅಂಗನವಾಡಿ ಕಾರ್ಯಕರ್ತೆಯರಿಗೆ ʻಭರ್ಜರಿ ಸಿಹಿ ಸುದ್ದಿʼ ನೀಡಿದ ಸಚಿವ ಹಾಲಪ್ಪ ಆಚಾರ್
ದನ ಕರುಗಳ ಹೆಸರಿನಲ್ಲಿ ವೋಟ್ ತೆಗೆದುಕೊಳ್ಳುವ ಇವರಿಗೆ ಇದು ಕಾಣುವುದಿಲ್ಲವಾ. ಮೊನ್ನೆ ಮುಖ್ಯಮಂತ್ರಿಯವರು ಬರುವ ಸಂದರ್ಭದಲ್ಲಿ ಹಾಕಿದ ಡಾಂಬಾರ್ ಒಂದೇ ದಿನದಲ್ಲಿ ಕಿತ್ತು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.