ಮಂಗಳೂರು : ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ನಟ ಚೇತನ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದೀಗ ಈ ಕುರಿತು ಕಾಂತಾರ ಚಿತ್ರ ನಿರ್ದೇಶಕರಾದ ರಿಷಬ್ ಶೆಟ್ಟಿಯವರ ತಂದೆ ಭಾಸ್ಕರ್ ಶೆಟ್ಟಿ(Bhaskar Shetty) ಖಾಸಗಿ ಮಾಧ್ಯಮಗಳ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದು ಹೀಗೆ
ಈಗಾಗಲೇ `ಕಾಂತಾರ’ ಚಿತ್ರದ ಸಕ್ಸಸ್ ಅಲೆಗೆ ಚಿತ್ರರಂಗವೇ ಶೇಕ್ ಆಗಿದೆ. ರಿಷಬ್ ಕಥೆಗೆ ಮತ್ತು ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಪರಭಾಷೆಗಳಿಂದಲೂ ಶೆಟ್ರಿಗೆ ಭರ್ಜರಿ ಆಫರ್ಸ್ ಅರಸಿ ಬರುತ್ತಿದೆ. ಇದೀಗ ಈ ಸಕ್ಸಸ್ ಹಿಂದಿರುವ ಸೀಕ್ರೆಟ್ ಬಗ್ಗೆ ಅವರ ತಂದೆ ಭಾಸ್ಕರ್ ಶೆಟ್ಟಿ ರಿವೀಲ್ ಮಾಡಿದ್ದಾರೆ.
ಪ್ರತಿಭಾವಂತ ನಟ ರಿಷಬ್ ಶೆಟ್ಟಿ ಶ್ರಮಜೀವಿ ಅದರಲ್ಲಿ ಎರಡು ಮಾತಿಲ್ಲ. ರಿಷಬ್ ಅವರ ತಂದೆ ಸಾಕಷ್ಟು ವರ್ಷಗಳಿಂದ ಜ್ಯೋತಿಷ್ಯ ಕಾರ್ಯ ಮಾಡುತ್ತಿದ್ದರು. ಇದೀಗ ತಮ್ಮ ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.
2021ರಿಂದ 16 ವರ್ಷ ರಿಷಬ್ಗೆ ಗಜಕೇಸರಿ ಯೋಗ ಇದೆ ಎಂದು ಅವರು ಹೇಳಿದ್ದಾರೆ. ಈ ಗಜಕೇಸರಿ ಯೋಗದಿಂದಲೇ ಶ್ರಮದ ಜೊತೆ ಸಕ್ಸಸ್ ಕೂಡ ಸಿಕ್ಕಿದೆ ಎಂಬುದನ್ನ ರಿಷಬ್ ತಂದೆ ಮಾತನಾಡಿದ್ದಾರೆ. ಸದ್ಯ ರಿಷಬ್ ಶೆಟ್ಟಿಗೆ ಟಾಲಿವುಡ್ ಸ್ಟಾರ್ ನಿರ್ಮಾಪಕ ಅಲ್ಲು ಅರವಿಂದ್ ಅವರು ತಮ್ಮ ಬ್ಯಾನರ್ ನಟಿಸುವಂತೆ ಆಫರ್ ಮಾಡಿದ್ದಾರೆ. ಅದಕ್ಕೆ ರಿಷಬ್ ಕೂಡ ಸಮ್ಮತಿ ಸೂಚಿಸಿದ್ದಾರೆ.
ಕಾಂತಾರ ಚಿತ್ರ ಕುರಿತು ವಿವಾದವೇನು ?
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.
ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ನಟ ಚೇತನ್ ಕಿಡಿ ಕಾರಿದ್ದಾರೆ.
ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ನಟ ಚೇತನ್ ಪ್ರಚಾರಕ್ಕಾಗಿ ಈ ವಿವಾದವನ್ನು ಎತ್ತಿದ್ದಾರೆ. ಎಲ್ಲೆಡೆ ಕಿಡಿಕಾರಿದ್ದಾರೆ., ಈ ಬಗ್ಗೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಮಾಧ್ಯಮಗಳೊಂದಿಗೆ ನಟ ಚೇತನ್ ಸ್ಪಷ್ಟನೆ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.