ಮಂಗಳೂರು : ನಟ ರಿಶಬ್ ಶೆಟ್ಟಿ ಹರಕೆಯ ಕೋಲ ಇದೀಗ ವಿವಾದಕ್ಕೆ ಕಾರಣವಾಗಿದೆ. ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ನರ್ತಕ ಅದು ದೈವವಲ್ಲ ಬದಲಾಗಿ ನರ್ತಕ ಎಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು ಕಾಂತಾರ ಚಾಪ್ಟರ್ 1 ಚಲನಚಿತ್ರ ಯಶಸ್ವಿಯಾದ ಹಿನ್ನೆಲೆ ಹರಕೆ ತೀರಿಸಲು ರಿಷಬ್ ಶೆಟ್ಟಿ ತೆರಳಿದಾಗ, ದೈವ ರಿಷಬ್ ಶೆಟ್ಟಿ ಅವರ ತೊಡೆಯ ಮೇಲೆ ಮಲಗಿರುವ ವಿಡಿಯೋ ವೈರಲ್ ಆಗಿತ್ತು. ಡಿಸೆಂಬರ್ 4ರಂದು ಮಂಗಳೂರಿನ ಬಂಟ ದೇವಸ್ಥಾನದಲ್ಲಿ ಹರಕೆ ಕೋಲ ನಡೆದಿತ್ತು. ಕೋಲದ ವೇಳೆ ರಿಷಬ್ ತೊಡೆಯ ಮೇಲೆ ದೈವ ನರ್ತಕ ಮಲಗಿದ್ದರು. ಈಗ ರಿಷಬ್ ಶೆಟ್ಟಿ ನೀಡಿದ ಹರಕೆಯ ಕೋಲದ ವಿವಾದಕ್ಕೆ ಕಾರಣವಾಗಿದೆ.
ಚಿತ್ರತಂಡದ ಭಾಗವಾಗಿದ್ದ ಮುಕೇಶ್ ಪಂಪದ ವಿರುದ್ಧ ಟೀಕೆಗಳು ಬಂದಿವೆ ದೈವರಾದನೆಯಲ್ಲಿ ದೈವಗಳು ಈ ರೀತಿ ವರ್ತಿಸುವುದಿಲ್ಲ ಎಂದು ಟೀಕೆಗಳು ಬರುತ್ತವೆ ವೈರಲ್ ವಿಡಿಯೋ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.







