ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಇದರ ಜೊತೆಗೆ ನಟ ಯಶ್ ನಟಿಸಿರುವ ಕೆಜಿಎಫ್: ಚಾಪ್ಟರ್ 2 ಸಿನೆಮಾಗೂ ಕೂಡ 2 ಪ್ರಶಸ್ತಿ. ದೊರಕಿವೆ. ನನಗೆ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಬಂದ ಕೂಡಲೇ ನಟ ಯಶ್ ಅವರು ಇಂದು ಅವರು ಶೂಟಿಂಗ್ನಲ್ಲಿ ಇದ್ದರಂತೆ. ರಾಷ್ಟ್ರ ಪ್ರಶಸ್ತಿ ಬಂದ ತಕ್ಷಣ ಫೋನ್ ಮಾಡಿ ವಿಶ್ ಮಾಡಿದರು ಎಂದು ಮಾಧ್ಯಮಗಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು.
ಯಶ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾಗೆ ತುಂಬ ದೊಡ್ಡ ಬೆಂಬಲ ನೀಡಿದ್ದರು. ಸಿನಿಮಾ ನೋಡಿ ನನಗೆ ವಿಶ್ ಮಾಡಿದ್ದರು. ಜನರಿಗೆ ಆ ಸಿನಿಮಾ ತಲುಪಲು ಅವರ ಕೊಡುಗೆ ಇತ್ತು. ಆ ಫೀಲಿಂಗ್ ಇಂದಿಗೂ ಅವರ ಮೇಲಿದೆ.ಅವರು ವಿಶ್ ಮಾಡಿದಕ್ಕೆ ಖುಷಿ ಆಯಿತು, ತುಂಬ ಹೆಮ್ಮೆ ಎನಿಸುತ್ತಿದೆ ಅಂತ ಹೇಳಿದರು. ‘ಕೆಜಿಎಫ್ 2’ ಸಿನಿಮಾಗೆ ಪ್ರಶಸ್ತಿ ಬಂದಿದ್ದಕ್ಕೆ ನಾನು ಅವರಿಗೆ ವಿಶ್ ಮಾಡಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇನ್ನು ಪ್ರಶಸ್ತಿ ಬಂದಿರುವ ಕುರಿತು ನಟ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಪ್ರಶಸ್ತಿ ಘೋಷಣೆ ಮಾಡುವಾಗಲೇ ಪ್ರಶಸ್ತಿ ಬಂದಿರುವುದು ಗೊತ್ತಾಗಿದೆ. ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ನಮ್ಮ ಸಿನಿಮಾ ತಂಡಕ್ಕೂ ಅಭಿನಂದನೆ ಹೇಳುತ್ತೇನೆ. ಕಾಂತಾರ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಈ ಒಂದು ಪ್ರಶಸ್ತಿಯನ್ನು ನಾನು ದೈವಕ್ಕೆ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.
ಇಡೀ ಚಿತ್ರತಂಡಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೇ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನನ್ನ ಪತ್ನಿಗೂ ಕೂಡ ಧನ್ಯವಾದ ಹೇಳುತ್ತೇನೆ. ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ತುಂಬಾ ಜನ ಕರೆ ಮಾಡಿ ನನಗೆ ಶುಭಾಶಯ ತಿಳಿಸಿದ್ದಾರೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.
ಇನ್ನು ಕನ್ನಡದ ಕಾಂತಾರ ಸಿನಿಮಾಗೆ ಎರಡು ಪ್ರಶಸ್ತಿ ಲಭಿಸಿದ್ದು, ಒಂದು ಕಾಂತಾರ ಸಿನಿಮಾ ನಟನೆಗಾಗಿ ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನೊಂದು ಅತ್ಯುತ್ತಮ ಮನರಂಜನಾ ಸಿನಿಮಾ ಪ್ರಶಸ್ತಿ ಕೂಡ ಕಾಂತಾರ ಸಿನಿಮಾ ಪಾಲಾಗಿದೆ. ಇನ್ನು ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಕೂಡ ಕನ್ನಡಿಗರ ಪಾಲಾಗಿದ್ದು, ಕೆಜೆಎಫ್‍ಪ್ರಶಸ್ತಿ ಲಭಿಸಿದೆ.