ಮಂಡ್ಯ: ಜಿಲ್ಲೆಯ ಅಗಸರಹಳ್ಳಿ ಬಳಿ ಎಣ್ಣೆ ಕೊಡದಿದ್ದಕ್ಕೆ ಬಾರ್ ಹಾಗೂ ಮಾಲೀಕರ ಕಾರಿಗೆ ಬೆಂಕಿ ಇಟ್ಟು ಪುಂಡರು ದಾಂಧಲೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಅಗಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪರಮೇಶ್ ಎಂಬುವರಿಗೆ ಸೇರಿದಂತ ಈಗಲ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ.
ಮುರುಕನಹಳ್ಳಿಯ ರಕ್ಷಿತ್ ಹಾಗೂ ಆತನ ಸ್ನೇಹಿತರಿಂದ ದಾಂಧಲೆಯನ್ನು ನಡೆಸಲಾಗಿದೆ. ಉಚಿತವಾಗಿ ಮದ್ಯಕ್ಕೆ ಬೇಡಿಕೆಯನ್ನು ರಕ್ಷಿತ್ ಮತ್ತು ಆತನ ಸ್ನೇಹಿತರು ಇಟ್ಟಿದ್ದರಂತೆ. ಮದ್ಯ ಕೊಡದಿದ್ದಕ್ಕೆ ಪೆಟ್ರೋಲ್ ಸುರಿದು ಬಾರ್ ಹಾಗೂ ಮಾಲೀಕ ಪರಮೇಶ್ ಕಾರಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಕೆ ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಭಾರಿ ಸುಂಟರಗಾಳಿಗೆ ಹಾರಿ ಬಿದ್ದ ಬೃಹತ್ ಪೆಂಡಾಲ್: ಸಚಿವ ಸತೀಶ್ ಜಾರಕಿಹೊಳಿ ಬಚಾವ್








