ಬೆಂಗಳೂರು: ಖಾಸಗಿ ಶಾಲೆಗಳು ಸರ್ಕಾರದ ನಿಗದಿ ಪಡಿಸಿದಂತ ಶುಲ್ಕದ ಜೊತೆಗೆ, ಇತರೆ ಉದ್ದೇಶಗಳಿಗೆ ಶುಲ್ಕ ಪಡೆಯುವುದನ್ನು ನಿಷೇಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 48 ಉಲ್ಲಂಘಿಸಿದಂತೆ ಆಗಲಿದೆ. ಶುಲ್ಕ ನಿಗದಿಯ ಹಕ್ಕು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೇರಿದ್ದು ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಆದೇಶಿಸಿದೆ.
ಈ ಸಂಬಂಧ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸೇರಿದಂತೆ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸದ್ದಂತ ಅರ್ಜಿಯ ವಿಚಾರಣೆಯನ್ನು, ನ್ಯಾಯಮೂರ್ತಿ ಇಎಸ್ ಇಂದಿರೇಶ್ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು.
ಖಾಸಗೀ ಅನುದಾನರಹಿತ ಶಾಲೆಗಳು ಸರ್ಕಾರ ನಿಗದಿ ಪಡಿಸಿದ್ದರ ಹೊರತಾಗಿ ಇತರ ಉದ್ದೇಶಗಳಿಗೆ ಶುಲ್ಕ ಪಡೆಯುವುದನ್ನು ನಿಷೇಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್ 48 ಅನ್ನು ಅಸಾಂವಿಧಾನಿಕ ಎಂಬುದಾಗಿ ತಿಳಿಸಿತು.
ಇನ್ನೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸುರಕ್ಷತೆಯ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗೀ ಶಾಲೆಗಳು ಮತ್ತವುಗಳ ಉದ್ಯೋಗಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವ ಕಾಯ್ದೆಯ ಸೆಕ್ಷನ್ 5ಎ, ಅನುದಾನರಹಿತ ಶಆಲೆಗಳನ್ನು ನಿಯಂತ್ರಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ಅಧಿಕಾರ ನೀಡುವ ಸೆಕ್ಷನ್ 2(11)(ಎ) ಹಾಗೂ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯುವುದನ್ನು ನಿಯಂತ್ರಿಸುವ ಸೆಕ್ಷನ್ 48ರ ಉಲ್ಲಂಘನೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 10 ಲಕ್ಷ ರೂ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ವಿದ್ದ ಸೆಕ್ಷನ್ 124ಎ ಸಹ ಕಾನೂನುಬಾಹಿರ ಎಂಬುದಾಗಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಾಟ್ಸಾಪ್, ಕ್ಯೂ ಆರ್ ಕೋಡ್ ಮೂಲಕ ಒಮ್ಮೆಗೆ ಟಿಕೆಟ್ ಖರೀದಿಗೆ ಅವಕಾಶ
ಮಾನಸಿಕ ಅಸ್ವಸ್ಥನ ಮಾತು ಕೇಳಿ 1 ತಾಸು ಚರಂಡಿ ಜಾಲಾಡಿದ ಪೊಲೀಸರು: ಯಾಕೆ ಅಂತ ಈ ಸುದ್ದಿ ಓದಿ