ಕಲಬುರ್ಗಿ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಮತ್ತೊಂದು ಭೀಕರ ಅಪಘಾತ ಎನ್ನುವಂತೆ ಕಾರೊಂದಕ್ಕೆ ಲಾರಿ ಡಿಕ್ಕಿಯಾಗಿ ಸಂಭವಿಸಿದೆ. ಈ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ದುರ್ಮರಣಹೊಂದಿದ್ದಾರೆ.
ಕಲಬುರ್ಗಿ ಜಿಲ್ಲೆಯ ಚಿಂಚೋಳಿಯ ಮಗದಂಪುರದ ಬಳಿಯಲ್ಲಿ ಕಾರಿಗೆ ಲಾರಿಯೊಂದು ಡಿಕ್ಕಿಯಾಗಿದೆ. ಈ ಪರಿಣಾಮ ಕಾರಿನಲ್ಲಿದ್ದಂತ ಅವಿನಾಶ್(24) ಅಭಿಷೇಕ್(26) ಹಾಗೂ ಸಂಜೀವ್ (40) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಈ ಘಟನೆಯಲ್ಲಿ ಕಾರಿನಲ್ಲಿದ್ದಂತ ಇತೆರ ಮೂವರು ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕುಂಚಾವರಂ ಪೊಲೀಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದಹಾಗೇ ಕಾರಿನಲ್ಲಿದ್ದವರು ಬೀದರ್ ನಿಂದ ತೆರಳುತ್ತಿದ್ದರು. ಲಾರಿ ತೆಲಂಗಾಣದಿಂದ ಚಿಂಚೋಳಿ ಕಡೆಗೆ ಸಾಗುತ್ತಿತ್ತು. ಈ ವೇಳೆಯಲ್ಲಿ ಕಲಬುರ್ಗಿಯ ಚಿಂಚೋಳಿ ಮಗದಂಪುರ ಬಳಿಯಲ್ಲಿ ಕಾರಿಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
Donald Trump Oath: 35 ಪದಗಳ ಪ್ರಮಾಣ ವಚನ, 700 ಅತಿಥಿಗಳು: ಡೊನಾಲ್ಡ್ ಟ್ರಂಪ್ ಪದಗ್ರಹಣದ ವಿಶೇಷತೆ ಇಲ್ಲಿದೆ
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin