ಬೆಂಗಳೂರು : ಉದ್ಘೋಷಿತ ಅಪರಾಧಿಗಳ ಸುಳಿವು ನೀಡುವ ಮಾಹಿತಿ್ದಾರರಿಗೆ 5 ಲಕ್ಷದವರೆಗೆ ಬಹುಮಾನ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ.
ಡಿಜಿ ಮತ್ತು ಐಜಿಪಿಗೆ ವಿಶೇಷ ಆರ್ಥಿಕ ವಿತ್ತಾಧಿಕಾರ ನೀಡಲು ಸರ್ಕಾರ ಮುಂದಾಗಿದ್ದು, ಉದ್ಘೋಷಿತ ಅಪರಾಧಿಗಳ ಸುಳಿವು ನೀಡುವ ಮಾಹಿತಿ್ದಾರರಿಗೆ 5 ಲಕ್ಷದವರೆಗೆ ಬಹುಮಾನ ನೀಡುವ ಕುರಿತು ಘೋಷಣೆ ಮಾಡಿದೆ.
ಡಿಜಿ ಮತ್ತು ಐಜಿಪಿ ಪ್ರಕರಣದ ತೀವ್ರತೆ ಅನುಗುಣವಾಗಿ ಬಹುಮಾನದ ಹಣದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. 20,000 ರೂ ನಿಂದ 5 ಲಕ್ಷದವರೆಗೆ ಬಹುಮಾನ ನೀಡಲಾಗುತ್ತಿದ್ದು, ಆದರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬಹುಮಾನ ಪಡೆಯುವ ಹಾಗಿಲ್ಲ ಎಂಬುದು ತಿಳಿದು ಬಂದಿದೆ.