ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ 25 ರಿಂದ ಮೇ 08 ರವರೆಗೆ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಯ ವಿವರಗಳು:
ಹೆಚ್ಚಿನ ಪರೀಕ್ಷೆಗಳು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿವೆ. ಕೆಲವು ವೃತ್ತಿಪರ ಹಾಗೂ ತಾಂತ್ರಿಕ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಿಗದಿಯಾಗಿವೆ.
ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
| ದಿನಾಂಕ | ದಿನ | ವಿಷಯಗಳು (ಬೆಳಿಗ್ಗೆ 10:00 – 1:00) |
| 25/04/2026 | ಶನಿವಾರ | ಕನ್ನಡ, ಅರೇಬಿಕ್ |
| 27/04/2026 | ಸೋಮವಾರ | ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ |
| 28/04/2026 | ಮಂಗಳವಾರ | ಇಂಗ್ಲಿಷ್ |
| 29/04/2026 | ಬುಧವಾರ | ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ |
| 30/04/2026 | ಗುರುವಾರ | ಅರ್ಥಶಾಸ್ತ್ರ, ಜೀವಶಾಸ್ತ್ರ |
| 02/05/2026 | ಶನಿವಾರ | ಇತಿಹಾಸ, ಗಣಿತ, ಗೃಹವಿಜ್ಞಾನ |
| 04/05/2026 | ಸೋಮವಾರ | ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ |
| 05/05/2026 | ಮಂಗಳವಾರ | ಹಿಂದಿ |
| 06/05/2026 | ಬುಧವಾರ | ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ |
| 07/05/2026 | ಗುರುವಾರ | ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ, ಮೂಲ ಗಣಿತ |
| 08/05/2026 | ಶುಕ್ರವಾರ | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
ವಿಶೇಷ ಸೂಚನೆ: ಮೇ 8ರಂದು ಮಧ್ಯಾಹ್ನ 2:00 ರಿಂದ ಸಂಜೆ 4:15ರ ವರೆಗೆ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ (IT), ರಿಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ವೃತ್ತಿಪರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ರಜೆ ದಿನಗಳು:
ಏಪ್ರಿಲ್ 26, ಮೇ 1 (ಕಾರ್ಮಿಕರ ದಿನಾಚರಣೆ) ಮತ್ತು ಮೇ 3 ರಂದು ಪರೀಕ್ಷೆಗಳಿಗೆ ರಜೆ ಇರಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಪ್‌ಡೇಟ್‌ಗಳಿಗಾಗಿ ಮಂಡಲಿಯ ಅಧಿಕೃತ ವೆಬ್‌ಸೈಟ್ ಅನ್ನು ಗಮನಿಸಬಹುದಾಗಿದೆ ಎಂದು ಮಂಡಲಿಯ ಅಧ್ಯಕ್ಷರು ತಿಳಿಸಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ 2026: ಕಾಂಗ್ರೆಸ್ ಪಕ್ಷದಿಂದ 55 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
BREAKING : ಎಲ್ಲಾ ಗ್ರಾಹಕರಿಗೆ ‘eKYC, ಆಧಾರ್ ದೃಢೀಕರಣ’ ಅಗತ್ಯವಿಲ್ಲ ; ಕೇಂದ್ರ ಸರ್ಕಾರ ಸ್ಪಷ್ಟನೆ








