ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಬಿಡುಗಡೆಯಾದ ನಂತರ ನೇರವಾಗಿ ಅವರು ತಂದೆ ಎಚ್ ಡಿ ದೇವೇಗೌಡರ ಮನೆಗೆ ತೆರಳಿದರು.
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಎಚ್ ಡಿ ದೇವೇಗೌಡರ ನಿವಾಸಕ್ಕೆ ಹೆಚ್ ಡಿ ರೇವಣ್ಣ ತೆರಳಿದರು ಈ ವೇಳೆ ಅವರಿಗೆ ಸಾರಾ ಮಹೇಶ್ ಸೇರಿದಂತೆ ಹಲವು ನಾಯಕರು ಜೊತೆಗಿದ್ದರು. ಈ ಬೆಳೆ ಸುದ್ದಿಗಾರರನ್ನಾಗಿ ಮಾತನಾಡಿದ ಸಾರಾ ಮಹೇಶ್ ಜೈಲಿನಿಂದ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಬಿಡುಗಡೆ ವಿಚಾರವಾಗಿ ರಾಜಕೀಯ ಪ್ರೇರಿತ ಸಂಚು ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಎಂದು ಎಚ್ ಡಿ ದೇವೇಗೌಡರ ನಿವಾಸದ ಬಳಿ ಸಾರಾ ಮಹೇಶ್ ಹೇಳಿಕೆ ನೀಡಿದರು.
ಸಂಚಿನ ಬಗ್ಗೆ ಆದಷ್ಟು ಬೇಗ ರಾಜ್ಯದ ಜನರಿಗೆ ಗೊತ್ತಾಗುತ್ತದೆ ರಾಜಕೀಯ ಪಿತೂರಿಯನ್ನು ನಡೆಸಿ ಎಚ್ಡಿ ರೇವಣ್ಣ ರನ್ನು ಬಂಧಿಸಲಾಗಿತ್ತು ಎಸಿಡಿ ರೇವಣ್ಣ ಬಗ್ಗೆ ಮಾತ್ರ ನಾನು ಕೇಳಿ ಬೇರೆ ವಿಚಾರ ಕೇಳಬೇಡಿ ಇದು ನನ್ನ ಹಾಗೂ ಜೆಡಿಎಸ್ ಪಕ್ಷದ ನಿಲುವು ತಪ್ಪು ಮಾಡದಿದ್ದರೂ ಜೈಲಿಗೆ ಕಳಿಸಿದರೆ ಎಂಬ ನೋವು ರೇವಣ್ಣರಿಗೆ ಇದೆ ಎಂದು ಅವರು ತಿಳಿಸಿದರು.