ಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ ಮಧ್ಯ ಮಂಡ್ಯದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಎಚ್ ಡಿ ರೇವಣ್ಣ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು ರೇವಣ್ಣ ನಡವಳಿಕೆ ಸರಿ ಇಲ್ಲ ಇಂಗ್ಲೆಂಡ್ನಲ್ಲಿಯೂ ಕೂಡ ಇಂಥದ್ದೇ ಪ್ರಕರಣದಲ್ಲಿ ತಗಲಾಕೊಂಡಿದ್ದರು ಎಂದು ಗಂಭೀರವಾದಂತಹ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರೇವಣ್ಣ ಇಂಗ್ಲೆಂಡ್ನಲ್ಲಿಯೂ ತಗಲು ಹಾಕಿಕೊಂಡಿದ್ದರು ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಗಂಭೀರವಾದ ಆರೋಪ ಮಾಡಿದರು. ನಾನು ರೇವಣ್ಣ ಇಂಗ್ಲೆಂಡ್ ಹೋಗಿದ್ದೇವು. 30 ವರ್ಷದ ಹಿಂದಿನ ಘಟನೆ ಇದೀಗ ರಿವಿಲ್ ಮಾಡಲು ಹೋಗುವುದಿಲ್ಲ ಎಂದರು.
ನಾನು ರೇವಣ್ಣ ಅವರ ಮನೆಯವರು ಹಾಗೂ ನನ್ನ ಮನೆಯವರು ಸೇರಿದಂತೆ ಇನ್ನಿಬ್ಬರು ಹೋಗಿದ್ದೆವು.ನಮ್ಮ ಜೊತೆ ತಿಮ್ಮೇಗೌಡ ಎನ್ನುವವರು ಕೂಡ ಬಂದಿದ್ದರು. ಬೇಕಾದರೆ ಅವರನ್ನ ಕೇಳಿ ಇದಕ್ಕೆ ಸಾಕ್ಷಿ ಇದಾರೆ ಬೇಕಾದರೆ ಅವರನ್ನು ಕೇಳಿ ಎಂದು ಗಂಭೀರ ಆರೋಪ ಮಾಡಿದರು.
30 ವರ್ಷದ ಹಿಂದೆ ನಡೆದ ಘಟನೆ ರಿವಿಲ್ ಮಾಡೋಕೆ ಹೋಗೋದಿಲ್ಲ. ಇಂಗ್ಲೆಂಡ್ ನಲ್ಲಿ ಈ ಕುರಿತು ತನಿಖೆ ಮಾಡಿದರೆ ರೆಕಾರ್ಡ್ ನಲ್ಲಿ ಸಿಗುತ್ತದೆ.ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಮುಂದೆ ಉಮೇಶ್ ರೆಡ್ಡಿ ಕೂಡ ಶೂನ್ಯ. ರೇವಣ್ಣ ನಡವಳಿಕೆ ಸರಿ ಇಲ್ಲ ಇಂಗ್ಲೆಂಡ್ನಲ್ಲಿಯೂ ಕೂಡ ತಗಲಾಗ್ಕೊಂಡಿದ್ದರು ಎಂದು ಆರೋಪಿಸಿದರು.