ಹಾಸನ : ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹಾಗೂ ಜೆಡಿಎಸ್ ಪಕ್ಷದ ನಾಯಕ ಎಚ್ಡಿ ರೇವಣ್ಣ ಕುಟುಂಬದ ಮಧ್ಯ ಸಂಘರ್ಷ ತೀವ್ರ ತಾರಕಕ್ಕೆ ಏರಿದು ಇದೀಗ ವಕೀಲ ಎಚ್ ಡಿ ರೇವಣ್ಣ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ರೇವಣ್ಣ ಅವರು ಮತಗಟ್ಟೆಯಲ್ಲಿ ನಿಂತು ಕಳ್ಳ ಮತ ಹಾಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಅವರು ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮತಗಟ್ಟೆಯಲ್ಲಿ ನಿಂತು ಎಚ್ ಡಿ ರೇವಣ್ಣ ಕಳ್ಳ ಮತ ಹಾಕಿಸಿದ್ದರು.ಹೈಕೋರ್ಟ್ ನಲ್ಲಿ ರೇವಣ್ಣ ಅಪರಾಧಿ ಎಂದು ಆದೇಶ ಬಂತು.ಎಚ್ ಡಿ ರೇವಣ್ಣ ವರದಿ ಎಂದು ತೀರ್ಪು ಬಂದಿದೆ. ರೇವಣ್ಣ ರಾಜಪಾಲರಿಂದ ಪ್ರಮಾಣವಚನ ಸ್ವೀಕರಿಸಿದರು ಎಂದು ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ 40 ರಿಂದ 50 ನಿಮಿಷಗಳ ಕಾಲ ಮತಗಟ್ಟೆಯಲ್ಲಿ ನಿಂತಿದ್ದರು. ಸಿಸಿಟಿವಿಯಲ್ಲಿ ಕಳ್ಳ ಮತ ಹಾಕಿಸಿರುವ ವಿಡಿಯೋ ಇದೆ. ಮತಗಟ್ಟೆ ಸಂಖ್ಯೆ 244ರಲ್ಲಿ ರೇವಣ್ಣ ಕಳ್ಳ ಮತ ಹಾಕಿಸಿದ್ರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದು ನಡೆದಿತ್ತು. ಈ ವಿಚಾರವಾಗಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಮೋದಿಯನ್ನು ಭೇಟಿಯಾಗಿದ್ದರು ಎಂದು ಆರೋಪಿಸಿದರು.