ಹಾಸನ : ಮನೆಯ ಕೆಲಸದಾಕೆ ಹೆಣ್ಣು ಅಪಹರಣ ಮಾಡಿರುವ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅರೆಸ್ಟ್ ಆಗಿದ್ದು ಇದೀಗ ಕಿಡ್ನ್ಯಾಪ್ ಆಗಿರುವಂತಹ ಮಹಿಳೆಯ ಕುರಿತಂತೆ ಸ್ಪೋಟಕ ವಾದಂತಹ ಮಾಹಿತಿ ಬಹಿರಂಗವಾಗಿದ್ದು ಸಂತ್ರಸ್ತ ಮಹಿಳೆ ತಂಗಿದ್ದ ತೋಟದ ಮನೆಯಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸ್ವಾಮಿ ಎನ್ನುವ ವ್ಯಕ್ತಿ ಹೇಳಿಕೆ ನೀಡಿದ್ದಾನೆ.
ಮೈಸೂರಿನ ಹುಣಸರಿನ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಾಳೆಹಳ್ಳಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಅಪಹರಣಕ್ಕೆ ಒಳಗಾದ ಸಂತ್ರಸ್ತೆಯನ್ನು ಕೂಡಿ ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ.ಈ ಒಂದು ಫಾರ್ಮ್ ಹೌಸ್ ಶಾಸಕ ಎಚ್ ಡಿ ರೇವಣ್ಣ ಅವರ ಆಪ್ತ ರಾಜಗೋಪಾಲ್ ಎನ್ನುವವರಿಗೆ ಸೇರಿದ್ದು, ಸುಮಾರು 25 ಎಕರೆ ಪ್ರದೇಶ ಹೊಂದಿರುವ ಫಾರ್ಮ ಹೌಸ್ ಆಗಿದೆ. ಇದು ಮಹಿಳೆಯ ರಕ್ಷಣೆಯಾದ ತೋಟದ ಸಿಬ್ಬಂದಿ ಸ್ವಾಮಿ ಹೇಳಿಕೆ ನೀಡಿದ್ದು, ಆ ಮಹಿಳೆ ಸಂಘಕ್ಕೆ ದುಡ್ಡು ಕಟ್ಟಬೇಕು ಅದಕ್ಕೆ ಕೆಲಸಕ್ಕೆ ಬಂದಿದ್ದೇನೆ ಎಂದು ನಮಗೆ ತಿಳಿಸಿದ್ದಳು.
ಆದರೆ ನಿನ್ನೆ ಪೊಲೀಸರು ಬಂದಾಗ ಆ ಮಹಿಳೆಯೇ ತಪ್ಪಿಸಿಕೊಂಡು ಹೋಗಲು ಯತ್ನಿಸಿದಳು. ಆ ಮಹಿಳೆಯನ್ನ ಯಾರ್ ಕರೆದುಕೊಂಡು ಬಂದರು ಬಿಟ್ರು ಗೊತ್ತಿಲ್ಲ. ನಾವು ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದೇವೆ. ಪೊಲೀಸರು ಬಂದಮೇಲೆ ನಮಗೆ ಇಂಥವರು ಇಲ್ಲಿದ್ದಾರೆ ಎಂದು ಗೊತ್ತಾಗಿದೆ.ನಮಗೆ ಮಹಿಳೆಯಲ್ಲಿ ಇದ್ದಿದ್ದು ಗೊತ್ತಿರಲಿಲ್ಲ. ಪೊಲೀಸರು ಬಂದ ತಕ್ಷಣ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾಳೆ. ಅಲ್ಲದೆ ರಾಜಗೋಪಾಲ್ ಕೂಡ ಇದೇ ತೋಟದಲ್ಲಿ ಇದ್ದರು. ಮೊನ್ನೆ ರಾತ್ರಿ ಪೊಲೀಸರು ಕರೆದುಕೊಂಡು ಹೋದರು ಎಂದು ತೋಟದ ಸಿಬ್ಬಂದಿ ಸ್ವಾಮಿ ಹೇಳಿಕೆ ನೀಡಿದ.
ಕಿಡ್ನಾಪ್ ಆಗಿದ್ದ ಮಹಿಳೆ ಬಗ್ಗೆ ಸ್ಪೋಟಕ ಮಾಹಿತಿ ಬಂದಿದ್ದು ಮೂರು ದಿನಗಳ ಹಿಂದೆ ಆ ಮಹಿಳೆ ಇಲ್ಲಿಗೆ ಬಂದಿದ್ದರು ಮಹಿಳೆ ನಾನು ಇಲ್ಲಿ ಕೆಲಸಕ್ಕೆ ಬಂದಿದ್ದೇನೆ ಅಂತ ಹೇಳಿದ್ದರು ಮಹಿಳೆ ಸಂಘಕ್ಕೆ ದುಡ್ಡು ಕಟ್ಟಬೇಕು ಹಾಗೆ ಹೀಗೆ ಅಂತ ಏನೇನೋ ಹೇಳಿ ಇದ್ದರು. ಆದರೆ ಮಹಿಳೆ ಹಿಂದೆ ಇತರ ಒಂದು ಘಟನೆ ನಡೆದಿದೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದರೆ ನಮಗೆ ಗೊತ್ತಿರಲಿಲ್ಲ ಮೊದಲೇ ಗೊತ್ತಾಗಿದ್ರೆ ನಾವೇ ಪೊಲೀಸ್ ರಿಗೆ ತಿಳಿಸುತ್ತಿದ್ದೇವು ಎಂದು ಸ್ವಾಮಿ ಹೇಳಿದ.