ನವದೆಹಲಿ: ಈ ತಿಂಗಳ ಡಿಸೆಂಬರ್ 8 ರಂದು ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ ನಡೆದ ಬೆನ್ನಲ್ಲೆ. ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ರಿಲೀಸ್ ಮಾಡಿದೆ. ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಧ್ಯಾಪಕಿ ಆಗಿರುವ ಶೆಲ್ಲಿ ಒಬೆರಾಯ್ ಅವರನ್ನ ಮೇಯರ್ ಅಭ್ಯರ್ಥಿಯಾಗಿ ಹಾಗೂ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನ ಉಪಮೇಯರ್ ಅಭ್ಯರ್ಥಿಗಳಾಗಿ ಆಪ್ ಘೋಷಿಸಲಾಗಿದೆ
BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ
ಇನ್ನೂ ದೆಹಲಿಯಲ್ಲಿ 6 ಬಾರಿ ಶಾಸಕರಾಗಿದ್ದ ಶೋಯೆಬ್ ಇಕ್ಬಾಲ್ ಅವರ ಪುತ್ರ ಆಲೆ ಮೊಹಮ್ಮದ್ ಇಕ್ಬಾಲ್ 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದೇ ತಿಂಗಳ ಡಿಸೆಂಬರ್ 8 ರಂದು ನಡೆದ ದೆಹಲಿ ನಗರಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದು, ಬಿಜೆಪಿಯ 15 ವರ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿತು. ಓಟ್ಟು 250 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನ ಗೆದ್ದರೆ, ಎಎಪಿ 134 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಕೇವಲ 9 ಸ್ಥಾನ ಗೆದ್ದು ತೀವ್ರ ಮುಖಭಂಗ ಅನುಭವಿಸಿತು
BIGG NEWS: ಯಾದಗಿರಿಯಲ್ಲೂ ಕೊರೊನಾ ಹೆಚ್ಚಳ ಭೀತಿ; ಬೂಸ್ಟರ್ ಡೋಸ್ ಕಡ್ಡಾಯ