ಬೆಂಗಳೂರು: ನಗರದಲ್ಲಿ ಸುರಿಯುತ್ತಿದೆ ಧಾರಾಕಾರ ಮಳೆ ಆಗಿದೆ.ಕಳೆದ ಎರಡು ದಿನಗಳಿಂದ ವರುಣ ಅಬ್ಬರಕ್ಕೆ ನಿವಾಸಿಗಳು ತತ್ತರಿಸಿ ಹೋಗಿದೆ. ಈ ನಡುವೆ ಯಮಲೂರು ಬಳಿ ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.
BIGG NEWS: ಸುಳ್ಯದಲ್ಲಿ ವ್ಯಾಪಕ ಮಳೆ: ರಸ್ತೆ ಜಲಾವೃತ; ಜನಜೀವನ ಅಸ್ತವ್ಯಸ್ತ
ಕೋಟಿಗಟ್ಟಲೇ ಹಣ ಕೊಟ್ಟು ಖರೀದಿಸಿದ ಅತ್ಯಂತ ಪ್ರತಿಷ್ಟಿತ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ. ಲಕ್ಷಗಟ್ಟಲೇ ಬೆಲೆಯ ಐಷಾರಾಮಿ ಕಾರುಗಳು ನೀರಿಗೆ ಮುಳುಗಡೆಯಾಗಿದೆ.ವಿಲ್ಲಾದ ಜನ ಈಗ ಟ್ರ್ಯಾಕ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾರೆ.
BIGG NEWS: ಸುಳ್ಯದಲ್ಲಿ ವ್ಯಾಪಕ ಮಳೆ: ರಸ್ತೆ ಜಲಾವೃತ; ಜನಜೀವನ ಅಸ್ತವ್ಯಸ್ತ
ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಟ್ರಾಕ್ಟರ್ಗಳೇ ಆಸರೆಯಾಗಿದೆ. ಎಸಿ ಕಾರು, ಎಸಿ ಬಸ್ಗಳಲ್ಲಿ ಓಡಾಡುತ್ತಿದ್ದವರು ಇದೀಗ ಟ್ರಾಕ್ಟರ್ನಲ್ಲಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.
ಹೆಚ್ಎಎಲ್ಟು ಬೆಳ್ಳಂದೂರು ಸಂಪರ್ಕಿಸುವ ರಸ್ತೆಗಳಲ್ಲಿ ನಾಲ್ಕು ಆಡಿ ನೀರು ತುಂಬಿದ್ದು, ಐದು ನಿಮಿಷಕ್ಕೊಂದಂತೆ ಎರಡು ಕಡೆಗಳಲ್ಲಿ ಹತ್ತಕ್ಕೂ ಹೆಚ್ಚು ಟ್ರಾಕ್ಟರ್ಗಳು ಪ್ರಯಾಣಕ್ಕೆ ಸಿದ್ದವಾಗಿವೆ.