Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

20 ವರ್ಷಗಳ ಬಳಿಕ ಮತ್ತೆ ಜಪಾನ್‌ನಿಂದ ಭಾರತೀಯ ಮಾವಿನ ಹಣ್ಣುಗಳ ಆಮದಿಗೆ ತಡೆ: ಕಾರಣವೇನು?

ಈದ್ ಬಲಿಪೀಠದಿಂದ ಪಾರಾದ ‘ಟ್ರಂಪ್’ ಎಮ್ಮೆ: ಇದೀಗ ಢಾಕಾ ಮೃಗಾಲಯದಲ್ಲಿ ಸಂರಕ್ಷಣೆ !

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್‌ಗೆ ಈದ್ ಶುಭಾಶಯ ಕೋರಿದ ಪ್ರಧಾನಿ ಮೋದಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎರಡು ಮೂರು ಜಿಲ್ಲೆಗೆ ESI ಆಸ್ಪತ್ರೆ ಸ್ಥಾಪನೆಗೆ ಕೇಂದ್ರಕ್ಕೆ ಮನವಿ: ಸಚಿವ ಸಂತೋಷ್ ಲಾಡ್
KARNATAKA

ರಾಜ್ಯದ ಎರಡು ಮೂರು ಜಿಲ್ಲೆಗೆ ESI ಆಸ್ಪತ್ರೆ ಸ್ಥಾಪನೆಗೆ ಕೇಂದ್ರಕ್ಕೆ ಮನವಿ: ಸಚಿವ ಸಂತೋಷ್ ಲಾಡ್

By ವಸಂತ ಬಿ ಈಶ್ವರಗೆರೆ

ಬೆಳಗಾವಿ ಸುವರ್ಣಸೌಧ : ಉತ್ತರ ಕರ್ನಾಟಕ ಭಾಗದಲ್ಲಿ ಇಎಸ್‌ಐ ಆಸ್ಪತ್ರೆಗೆ ಬೇಡಿಕೆ ಇದೆ. ಆದರೆ ಐಪಿ ಹೋಲ್ಡರ್‌ (ESI ಯೋಜನೆಯಲ್ಲಿ ನೋಂದಾಯಿಸಿದ ವಿಮೆ ಮಾಡಿದ ವ್ಯಕ್ತಿ (Insured Person) ಕಡಿಮೆ ಇರುವ ಕಾರಣ ಇಎಸ್‌ಐ ಆಸ್ಪತ್ರೆಗೆ ಅನುಮತಿ ಸಿಗುತ್ತಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೇ ದಿನ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ರಾಣೆಬೆನ್ನೂರಿನ ಶಾಸಕರಾದ ಪ್ರಕಾಶ್‌ ಕೋಳಿವಾಡ ಅವರ ಪ್ರಶ್ನೆಗೆ ಉತ್ತರ ನೀಡಿದರು.

ಇಎಸ್‌ಐ ಆಸ್ಪತ್ರೆ ಆಗಲು ೫೦ ಸಾವಿರ ಐಪಿ ಹೋಲ್ಡರ್‌ ಇರಬೇಕು. ಎರಡು ಅಥವಾ ಮೂರು ಜಿಲ್ಲೆಗೆ ಸೇರಿ ಒಂದು ಇಎಸ್‌ಐ ಆಸ್ಪತ್ರೆಗೆ ಅವಕಾಶ ನೀಡಲು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದಿದ್ದೇನೆ. ಅನುಮತಿ ಸಿಕ್ಕರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇಎಸ್‌ಐ ಆಸ್ಪತ್ರೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಇದೆ. ಅದರಂತೆ ನಡೆದುಕೊಳ್ಳಬೇಕಿದೆ ಎಂದು ಹೇಳಿದರು.

ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಪರೀಕ್ಷೆ ಮಾತ್ರ ಮಾಡಲು ಅವಕಾಶ ಇದೆ. ಹೆಚ್ಚಿನ ಚಿಕಿತ್ಸೆ ಸಾಧ್ಯವಿಲ್ಲ. ಈ ಬಗ್ಗೆ ರೋಗಿಗಳ ಸಂಬಂಧಿಗಳು ತಿಳಿದುಕೊಳ್ಳಬೇಕು ಎಂದು ಲಾಡ್‌ ಅವರು ವಿವರಿಸಿದರು.

ರಾಣೆಬೆನ್ನೂರಿನಲ್ಲಿ ೨೦೨೨ ರಲ್ಲಿ ಇಎಸ್‌ಐ ಆಸ್ಪತ್ರೆ ಆರಂಭವಾಗಿದೆ. ನಾಲ್ಕು ವರ್ಷ ಆದರೂ ಖಾಯಂ ವೈದ್ಯರು ಇಲ್ಲ. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಡುತ್ತಿದ್ದಾರೆ ಎಂದು ಪ್ರಕಾಶ್‌ ಕೋಳಿವಾಡ ಅವರು ತಿಳಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ಖಾಯಂ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಲಾಡ್‌ ಅವರಿಗೆ ಅಭಿನಂದನೆ

ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ಸೌಲಭ್ಯವನ್ನು ಜಾರಿ ಮಾಡಿದಕ್ಕೆ ಪ್ರಕಾಶ್‌ ಕೋಳಿವಾಡ ಅವರು, ಸಂತೋಷ್‌ ಲಾಡ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮಹಿಳೆಯರಿಗೆ ಋತುಚಕ್ರ ರಜೆ ನೀಡಿದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಇದು ಬಹುದಿನದ ಬೇಡಿಕೆ ಆಗಿತ್ತು. ಸರ್ಕಾರಕ್ಕೆ ವಿಶೇಷವಾಗಿ ಸಚಿವ ಲಾಡ್‌ ಅವರಿಗೆ ಅಭಿನಂದನೆಗಳು. ರಾಣೆಬೆನ್ನೂರಿನಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಆರಂಭಕ್ಕೆ ಸಹ ಲಾಡ್‌ ಅವರು ಕ್ರಮವಹಿಸಿದ್ದಾರೆ. ಅದಕ್ಕೂ ಅವರಿಗೆ ಅಭಿನಂದನೆಗಳು ಎಂದು ಕಲಾಪದಲ್ಲಿ ಹೇಳಿದರು.

Share. Facebook Twitter LinkedIn WhatsApp Email

Related Posts

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ: ಕುರಿಗಾಯಿಯಿಂದ ಸಿಎಂ ಪಟ್ಟದವರೆಗಿನ ಸ್ಫೂರ್ತಿದಾಯಕ ಪಯಣ

2 Mins Read

ಶಿವಮೊಗ್ಗ: ಮೇ.30ರಂದು ಸೊರಬ ಪಟ್ಟಣ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

1 Min Read

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್: ವಿದೇಶ ಪ್ರವಾಸಕ್ಕೆ ಅನುಮತಿ

1 Min Read
Recent News

20 ವರ್ಷಗಳ ಬಳಿಕ ಮತ್ತೆ ಜಪಾನ್‌ನಿಂದ ಭಾರತೀಯ ಮಾವಿನ ಹಣ್ಣುಗಳ ಆಮದಿಗೆ ತಡೆ: ಕಾರಣವೇನು?

ಈದ್ ಬಲಿಪೀಠದಿಂದ ಪಾರಾದ ‘ಟ್ರಂಪ್’ ಎಮ್ಮೆ: ಇದೀಗ ಢಾಕಾ ಮೃಗಾಲಯದಲ್ಲಿ ಸಂರಕ್ಷಣೆ !

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್‌ಗೆ ಈದ್ ಶುಭಾಶಯ ಕೋರಿದ ಪ್ರಧಾನಿ ಮೋದಿ!

‘ಇಸ್ರೇಲ್ ಜೊತೆ ಸಂಬಂಧ ಇಟ್ಟುಕೊಂಡರೆ ದೇಶವನ್ನೇ ನಾಶ ಮಾಡುತ್ತೇವೆ’: ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ LeT ಉಗ್ರ ಸಂಘಟನೆ!

State News
KARNATAKA

ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ: ಕುರಿಗಾಯಿಯಿಂದ ಸಿಎಂ ಪಟ್ಟದವರೆಗಿನ ಸ್ಫೂರ್ತಿದಾಯಕ ಪಯಣ

By ಗೋಪಾಲ್‌ ಎನ್‌ KARNATAKA 2 Mins Read

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಮೇ 28, 2026) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಉಪ…

ಶಿವಮೊಗ್ಗ: ಮೇ.30ರಂದು ಸೊರಬ ಪಟ್ಟಣ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

BREAKING: ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ಬಿಗ್ ರಿಲೀಫ್: ವಿದೇಶ ಪ್ರವಾಸಕ್ಕೆ ಅನುಮತಿ

ಶನಿ ದೋಷದಿಂದ ವಿಮುಕ್ತಿಗಾಗಿ ಶನಿ ಜಯಂತಿಯನ್ನು ಹೀಗೆ ತಪ್ಪದೇ ಮಾಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.