ನಕಲಿ ಟಿಆರ್ ಪಿ ಪ್ರಕರಣ : ಎಫ್ಐಆರ್ ರದ್ದು ಕೋರಿ ಮುಂಬೈ ಹೈಕೋರ್ಟ್ ಮೊರೆ ಹೋದ ರಿಪಬ್ಲಿಕ್ ಟಿವಿ – Kannada News Now


India

ನಕಲಿ ಟಿಆರ್ ಪಿ ಪ್ರಕರಣ : ಎಫ್ಐಆರ್ ರದ್ದು ಕೋರಿ ಮುಂಬೈ ಹೈಕೋರ್ಟ್ ಮೊರೆ ಹೋದ ರಿಪಬ್ಲಿಕ್ ಟಿವಿ

ಮುಂಬೈ: ನಕಲಿ ಟಿಆರ್ ಪಿ ಪ್ರಕರಣದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದನ್ನು ರದ್ದುಪಡಿಸುವಂತೆ ಕೋರಿ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಟಿವಿಯ ಮಾಲೀಕ ಸಂಸ್ಥೆ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈ.ಲಿಮಿಟೆಡ್ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೇಸಿನ ಬಗ್ಗೆ ಮುಕ್ತ ಮತ್ತು ಪಾರದರ್ಶಕವಾಗಿ ತನಿಖೆ ನಡೆಯಲು ಮತ್ತು ಈ ಪ್ರಕರಣವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಣಾಮ ಬೀರುವುದರಿಂದ ಸಿಬಿಐಗೆ ವಹಿಸಬೇಕೆಂದು ಸಹ ಅರ್ಜಿಯಲ್ಲಿ ಕೋರಿದ್ದಾರೆ.

ಮುಂಬೈ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ನಕಲಿ ಟಿಆರ್ ಪಿ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 6 ಮಂದಿಯನ್ನು ಬಂಧಿಸಲಾಗಿದೆ.
error: Content is protected !!