Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನವೆಂಬರ್ ನಲ್ಲಿ ಕ್ರಾಂತಿ- ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ: ಬಿವೈ ವಿಜಯೇಂದ್ರ
KARNATAKA

ನವೆಂಬರ್ ನಲ್ಲಿ ಕ್ರಾಂತಿ- ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ: ಬಿವೈ ವಿಜಯೇಂದ್ರ

By kannadanewsnow0912/07/2025 9:04 PM

ಬೆಂಗಳೂರು: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೊನ್ನೆ ದೆಹಲಿಯಲ್ಲಿದ್ದರು. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಥವಾ ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಕರ್ನಾಟಕಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಧ್ಯೆ ಸಂಬಂಧಗಳು ಹಳಸಿಹೋಗಿದೆ ಎಂಬುದೇ ಇದರ ಅರ್ಥ ಎಂದು ನುಡಿದರು.

ರಾಜ್ಯ ಸರಕಾರದ ಮೇಲೆ ಒಂದು ರೀತಿ ಮೋಡ ಕವಿದ ವಾತಾವರಣವಿದೆ. ಯಾವತ್ತು ಗುಡುಗು, ಸಿಡಿಲಿನ ಮಳೆ ಪ್ರಾರಂಭವಾಗುತ್ತದೋ ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ಎಲ್ಲವೂ ಕೂಡ ಸರಿಯಿಲ್ಲ ಎಂಬುದಂತೂ ಸತ್ಯ. ಮುಖ್ಯಮಂತ್ರಿಗಳು- ಉಪ ಮುಖ್ಯಮಂತ್ರಿಗಳ ಹಗ್ಗಜಗ್ಗಾಟ ಮತ್ತು ಕುರ್ಚಿಗಾಗಿ ಪೈಪೋಟಿ ನಡೆದಿದೆ. ಯಾರು ಮುಖ್ಯಮಂತ್ರಿ? ಇವರೇ ಇರುತ್ತಾರೋ, ಬದಲಾವಣೆ ಆಗುತ್ತಾರೋ ಎಂಬುದರಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ವಾಪಸ್ ಆಗಿರುವುದು ಒಳ್ಳೆಯ ಸಂಕೇತವಲ್ಲ; ಏನೇನು ಬೆಳವಣಿಗೆ ಆಗುತ್ತದೋ ಕಾದುನೋಡೋಣ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ- ಸರಕಾರದಲ್ಲಿ ಸುನಾಮಿ ಬರುವ ಭೀತಿ ಇದೆ. ಅದಕ್ಕಾಗಿ ಬೇರೆ ಬೇರೆ ಹೇಳಿಕೆ ಕೊಟ್ಟು ವಿಚಾರಗಳನ್ನು ಬದಲಿಸುವ ಪ್ರಯತ್ನ- ಕುತಂತ್ರ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಹಾಗೂ ಶಾಸಕರ ಮಧ್ಯೆ ಯಾರು ಸಿಎಂ ಆಗಬೇಕೆಂಬ ವಿಷಯದಲ್ಲಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ರಾಜ್ಯದ ಜನರು ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನಾವು ವಿಪಕ್ಷದಲ್ಲಿ 3 ವರ್ಷ ಆರಾಮವಾಗಿ ಇರಲಿದ್ದೇವೆ. ಆ ವಿಷಯದಲ್ಲಿ ಆತಂಕ ಇಲ್ಲ. 2028ರಲ್ಲಿ ನಮ್ಮ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆಯೇ ಹೊರತು ಇವರ ಜೊತೆ ಸೇರಿ ಗುದ್ದಾಡುವ ಅವಶ್ಯಕತೆ ನಮಗಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ನವೆಂಬರ್‍ನಲ್ಲಿ ಕ್ರಾಂತಿ- ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ. ಆದರೆ, ರಾಜ್ಯದ ಆಡಳಿತ ಪಕ್ಷದಲ್ಲಿ ಯುದ್ಧ ಪ್ರಾರಂಭವಾಗಿದೆ ಎಂಬುದು ಸತ್ಯ. ಯಾರ್ಯಾರನ್ನು ಇದು ಬಲಿ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಿ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಾವು ವಿಪಕ್ಷವಾಗಿದ್ದು, ಸರಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನರು ಕೂಡ ಬೀದಿಗಿಳಿದು ಹೋರಾಟ ಮಾಡುವ ವಾತಾವರಣ ನಿರ್ಮಾಣವಾಗಿದೆ. ಈ ಸರಕಾರ ಇದ್ದರೆಷ್ಟು, ಬಿದ್ದರೆಷ್ಟು, ಸಿಎಂ ಬದಲಾದರೆಷ್ಟು, ಇನ್ಯಾರೋ ಮುಖ್ಯಮಂತ್ರಿ ಆದರೆಷ್ಟು- ಇವ್ಯಾವುದೂ ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗಾಗಿ ರಾಜ್ಯದ ಜನರಿಗೆ ಇದರ ಬಗ್ಗೆ ಆಸಕ್ತಿಯೂ ಇಲ್ಲ ಎಂದು ತಿಳಿಸಿದರು.

ನಮ್ಮ ಪಕ್ಷದ ವರಿಷ್ಠರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಎಲ್ಲವೂ ಕೂಡ ಒಳ್ಳೆಯದಾಗಲಿದೆ ಎಂದು ಅವರು ಪ್ರಶ್ನೆಗೆ ವಿಶ್ವಾಸದಿಂದ ಉತ್ತರ ಕೊಟ್ಟರು. ಸೋಮಣ್ಣ ಅವರು ಕೇಂದ್ರದ ಸಚಿವರು; ಪಕ್ಷದ ಹಿರಿಯರಿದ್ದು, ಪಕ್ಷದ ಬಗ್ಗೆ ಕಾಳಜಿ, ಬದ್ಧತೆ ಇಟ್ಟುಕೊಂಡವರು. ಸೋಮಣ್ಣ ಅವರು ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಶ್ರೀರಾಮುಲು- ಜನಾರ್ದನ ರೆಡ್ಡಿ ಅವರ ವಿಷಯದಲ್ಲಿ ಮಾತನಾಡಿದರೆ ಅದು ಸ್ವಾಗತಾರ್ಹ. ಸಾಧ್ಯವಾದರೆ ನಾನು ಕೂಡ ಜೋಡಿಸಿಕೊಳ್ಳುವೆ ಎಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ- ಮಹಾನಗರ ಪಾಲಿಕೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅವರ ನ್ಯಾಯಸಮ್ಮತ ಬೇಡಿಕೆ ಈಡೇರಿಸುವ ಕರ್ತವ್ಯ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳದು. ಅಭಿವೃದ್ಧಿ ಇಲ್ಲದೇ ಜನರು ಪರದಾಡುವಂತಾಗಿದೆ. ಮತ್ತೊಂದು ಕಡೆ ಕಾರ್ಮಿಕರ ಬೇಡಿಕೆ ಈಡೇರಿಸಲು ಸಾಧ್ಯವಾಗದೇ ಜನಸಾಮಾನ್ಯರು ನಗರಗಳಲ್ಲಿ ಪರದಾಡುತ್ತಿದ್ದಾರೆ. ಬೇಡಿಕೆ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡಲೇ ಗಮನ ಕೊಡಬೇಕೆಂದು ಅವರು ಆಗ್ರಹಿಸಿದರು.

ಆಧುನಿಕ ಜೀವನ ಶೈಲಿಗೆ ಕುಗ್ಗುತ್ತಿದೆ ‘ಯುವ ಹೃದಯ’ಗಳ ಮಿಡಿತ: ‘ಹೃದಯಾಘಾತ’ದಿಂದ ಪಾರಾಗುವ ಬಗ್ಗೆ ಇಲ್ಲಿದೆ ಮಾಹಿತಿ | Heart Attack

ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

Share. Facebook Twitter LinkedIn WhatsApp Email

Related Posts

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

03/05/2026 8:36 PM2 Mins Read

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM1 Min Read

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM1 Min Read
Recent News

ಕಾಮೋತ್ತೇಜಕ, ಲೈಂಗಿಕ ಜೀವನವನ್ನು ಉತ್ತಮಗೊಳಿಸುವ 7 ಅದ್ಭುತ ಆಹಾರಗಳಿವು

03/05/2026 9:21 PM

ಸಂತೋಷದಾಯಕ ಲೈಂಗಿಕ ಜೀವನಕ್ಕೆ ‘ಫೋರ್‌ಪ್ಲೇ’ ಏಕೆ ಮುಖ್ಯ? ಇಲ್ಲಿವೆ ಪ್ರಮುಖ ಕಾರಣಗಳು

03/05/2026 9:18 PM

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

03/05/2026 9:09 PM

ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?

03/05/2026 9:01 PM
State News
KARNATAKA

ಪದ್ಮಶ್ರೀ ಪುರಸ್ಕೃತ ಅಂಕೇಗೌಡ ದಂಪತಿಗಳ ಸಾಧನೆ ಅಪಾರ: ಸಂಸದ ಜಿ.ಕುಮಾರನಾಯಕ್

By kannadanewsnow0903/05/2026 8:36 PM KARNATAKA 2 Mins Read

ಮಂಡ್ಯ : ಜಿಲ್ಲೆಯಲ್ಲಿನ ಪುಸ್ತಕದ ಮನೆಯೊಂದು ಜಿಲ್ಲೆ ಮತ್ತು ರಾಜ್ಯವನ್ನು ದಾಟಿ ರಾಷ್ಟ್ರದ ರಾಜಧಾನಿ ದೆಹಲಿವರೆವಿಗೂ ತಲುಪಿರುವುದು ಶ್ಲಾಘನೀಯ ಕಾರ್ಯವೆಂದು…

ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡರಹಳ್ಳಿ ಅಂಕೇಗೌಡ ಆಯ್ಕೆ

03/05/2026 8:34 PM

BREAKING: KPSC ಭ್ರಷ್ಟಾಚಾರ ತಡೆಗೆ ಮಹತ್ವದ ಕ್ರಮ: ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸದನ ಸಮಿತಿ ರಚನೆ

03/05/2026 7:15 PM

Watch Video: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಎಳೆನೀರು ತುಂಬಿದ್ದ ಬೊಲೆರೊ ವಾಹನ ಪಲ್ಟಿ: ಭಯಾನಕ ವೀಡಿಯೋ ಇಲ್ಲಿದೆ

03/05/2026 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.