ಬೆಂಗಳೂರು : ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಇದ್ದಾರೆ. ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಕುರಿತು ಪ್ರಾಸಿಕ್ಯೂಶನ್ ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಅರ್ಜಿಯ ಕುರಿತು ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಆಕ್ಷೇಪಣೆ ಸಲ್ಲಿಸಲು ದರ್ಶನ್ ಪರ ವಕೀಲರು ಕಾಲಾವಕಾಶ ಕೊರಿದ್ದರು ಎ ಪೋರ್ಟಿನ್ ಪ್ರಧೋಷ್ ಪರ ವಕೀಲರು ಅಕ್ಷೇಪಣೆ ಸಲ್ಲಿಸಿದರು. ಕಳೆದ ಬಾರಿ ದರ್ಶನ್ ಜೈಲಿನಲ್ಲಿದ್ದಾಗ ವಿಶೇಷ ಸವಲತ್ತು ನೀಡಲಾಗಿತ್ತು. ಜೇಲಿನಲ್ಲಿ ರೌಡಿಗಳೊಂದಿಗೆ ಸಿಗರೇಟ್ ಸೇದುತ್ತಿದ್ದ ಫೋಟೋ ವೈರಲ್ ಆಗಿತ್ತು. ಘಟನೆ ಮರುಕಳಿಸಿದರೆ ಕ್ರಮದ ಎಚ್ಚರಿಕೆ ಸುಪ್ರೀಂ ಕೋರ್ಟ್ ನೀಡಿತ್ತು. ಇದೀಗ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ಕುರಿತು ಇಂದು ವಿಚಾರಣೆ ನಡೆಯಲಿದೆ.