ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಕುರಿತು ಕಣ್ಣೀರು ಹಾಕಿರುವ ಪತ್ನಿ ಸಹನಾ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಮನುಷ್ಯರಲ್ವಾ? ನನಗೆ ನ್ಯಾಯ ಕೊಡಿಸಿ, ದೊಡ್ಡ ನಟರೇ ಹೀಗೆ ಮಾಡಿದ್ರೆ ತಪ್ಪಲ್ವಾ? ನನ್ನ ಗಂಡ ತಪ್ಪು ಮಾಡಿದ್ರೆ ವಾರ್ನಿಂಗ್ ಮಾಡಿ ಬಿಡಬಹುದಾಗಿತ್ತು ಎಂದು ಕಣ್ಣೀರು ಹಾಕಿದ್ದಾರೆ. ಪವಿತ್ರಾಗೌಡ ಹೆಣ್ಣಾಗಿ ಮತ್ತೊಬ್ಬ ಹೆಣ್ಣಿನ ತಾಳಿ ಕಿತ್ತುಕೊಂಡಿರುವುದು ಎಷ್ಟು ಸರಿ ಹೇಳಿ. ಅವರು ಮನುಷ್ಯರಲ್ವಾ? ಅವರಿಗೆ ಹೆಂಡತಿ ಮಕ್ಕಳಿಲ್ವಾ? ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರೇಣುಕಸ್ವಾಮಿ ಪತ್ನಿ ಸಹನಾ ಆಗ್ರಹಿಸಿದ್ದಾರೆ.
ನನ್ನ ಮನೆಯವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ. ನಾನು ಗೃಹಿಣಿ, ಹೀಗೆ ಆಗಬಾರದಿತ್ತು. ಮದುವೆ ಆಗಿ ಒಂದು ವರ್ಷ ಅಷ್ಟೇ ಆಗಿದೆ. ನಾನು ತಾಯಿಯಾಗುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಹೀಗಾದರೆ ಏನು ಮಾಡೋದು. ಮೊನ್ನೆ ಕರೆ ಮಾಡಿ ನಮ್ಮ ಜೊತೆ ಮಾತನಾಡಿದ್ದರು. ಅದೇ ಕೊನೆ. ಅವರೇನು ದರ್ಶನ್ ಅಭಿಮಾನಿ ಆಗಿರಲಿಲ್ಲ. ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ ಕೊಡಿಸಲು ಜನ ಇದ್ದಾರೆ. ಆದರೆ ಮುಂದೆ ನಾನು ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರುತ್ತಾರೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.