ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಗಳು ಕೊಲೆ ಮಾಡುವ ಸಂದರ್ಭದಲ್ಲಿ ಬಳಸಿದ್ದ ಎರಡು ಕಾರುಗಳನ್ನು ಸೀಸ್ ಮಾಡಿದ್ದಾರೆ ಒಂದು ಜೀಪ್ ಹಾಗೂ ಇನ್ನೊಂದು ಸ್ಕಾರ್ಪಿಯೋ ಕಾರ್ ಎಂದು ಹೇಳಲಾಗುತ್ತಿದೆ. ಆದರೆ ಸ್ಕಾರ್ಪಿಯೋ ಕಾರಿನಲ್ಲಿ ಒಂದು ಲೇಡೀಸ್ ಬ್ಯಾಗ್ ಸಿಕ್ಕಿದ್ದು ಅದು ಪವಿತ್ರ ಗೌಡದ್ದೆಯ ಎಂದು ತನಿಖೆಯ ವೇಳೆ ಬಯಲಾಗಬೇಕಾಗಿದೆ.
ಹೌದು ರೇಣುಕಾ ಸ್ವಾಮಿ ಕೊಲೆಗೆ ಬಳಸಿದ ಕಾರುಗಳು ಇದೀಗ ಸೀಸ್ ಮಾಡಲಾಗಿದೆ. ಒಂದು ಕಪ್ಪು ಬಣ್ಣದ ಸ್ಕಾರ್ಪಿಯೋ ಹಾಗೂ ಕೆಂಪು ಬಣ್ಣದ ಥಾರ್ ಜೀಪ್ ಕಾರುಗಳನ್ನು ಪೊಲೀಸರು ಇದೀಗ ಸೀಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾ ಸ್ವಾಮಿ ಮೃತದೇಹವನ್ನು ಇದೆ ಕಾರಿನಲ್ಲಿ ಶಿಫ್ಟ್ ಮಾಡಿದ್ದರು.
ಜೀಪ್ ಮತ್ತು ಸ್ಕಾರ್ಪಿಯೋ ಕಾರನ್ನು ಇದೀಗ ಪೊಲೀಸರು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೆಂಪು ಬಣ್ಣದ ಜೀಪ್ ನಲ್ಲಿ ಒಂದು ಮಧ್ಯದ ಬಾಟಲ್ ಕೂಡ ಪತ್ತೆಯಾಗಿದೆ. ಆರೋಪಿ ವಿನಯ್, ಪ್ರದೋಷ್ ಹೆಸರಿನಲ್ಲಿ ಈ ಕಾರುಗಳು ನೋಂದಣಿಯಾಗಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಸ್ಕಾರ್ಪಿಯೋ ಕಾರಿನಲ್ಲಿ ಲೇಡೀಸ್ ಬ್ಯಾಗ್ ಕೂಡ ಪತ್ತೆಯಾಗಿದೆ. ಈ ಒಂದು ಬ್ಯಾಗ್ ಪವಿತ್ರ ಗೌಡಗೆ ಸೇರಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.