ಚಿತ್ರದುರ್ಗ : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಆಗಿರುವಂತಹ ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ಇಂತಹ ಒಂದು ಬೆಳವಣಿಗೆ ಜೈಲಿನಲ್ಲಿ ನಡೆಯುತ್ತದೆ ಎಂದು ತಿಳಿದು ಸಹಜವಾಗಿ ನಾನು ಶಾಕ್ ಆದೆ.ಹಾಗಾಗಿ ಈ ಒಂದು ಪ್ರಕರಣ ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಈ ರೀತಿ ನಡಿತಾ ಇರೋದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೋರ್ಟ್ನಲ್ಲಿ ನಮಗೆ ಮನೆ ಊಟ ಬೇಕು, ಹಾಸಿಗೆ ಬೇಕು ಅಂತ ಕೂಡ ದರ್ಶನ್ ಅವರು ಅರ್ಜಿ ಸಲ್ಲಿಸಿದ್ದರು. ಇಲ್ಲ ಕೊಡಕ್ಕಾಗಲ್ಲ ಅಂತ ಜೈಲ ಅಧಿಕಾರಿಗಳು ಕೂಡ ಹೇಳಿಕೆ ಕೊಟ್ಟಿದ್ದರು. ಆದರೆ ಜೈಲಲ್ಲಿ ಸದ್ಯ ಈ ತರ ನಡಿತಾ ಇರೋದು ನೋಡಿ ಬೇಸರವಾಯ್ತು.
ಕೋರ್ಟಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಮೋಸ ಮಾಡುತ್ತಿದ್ದಾರೆ. ಪೊಲೀಸ್ ನಿಷ್ಠಾವಂತ ಅಧಿಕಾರಿಗಳಿಗೆ ಮೋಸ ಮಾಡುತ್ತಿದ್ದಾರೆ. ನಮಗೆ ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ಮಾತ್ರ ನ್ಯಾಯ ಸಿಗುವ ಸಾಧ್ಯತೆ ಇದೆ ಅನ್ಸುತ್ತೆ. ಯಾವುದೊ ಕೆಲವು ಅಧಿಕಾರಿಗಳು ಮಾಡಿದರೆ ಅಲ್ಲಿ ಇಡಿ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ. ಮಂತ್ರಿಗಳು ಆಗಲಿ ಸರ್ಕಾರ ಆಗಲಿ ಇದಕ್ಕೆ ಸೂಕ್ತ ಕ್ರಮ ಕಠಿಣ ಕ್ರಮ ತೆಗೆದುಕೊಳ್ಳ ಬೇಕು ಎಂದು ಅವರು ಆಗ್ರಹಿಸಿದರು.