ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ನಡೆದ ದಿನ ನಟ ದರ್ಶನ್ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಟ್ಟೆಗಳನ್ನು ವಿಧಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ತನಿಖೆಗಾಗಿ ಕಳುಹಿಕೊಡಲಾಗಿದೆ.
ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯಿಂದ ಈ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ನಟ ದರ್ಶನ್ ದುಬಾರಿ ಬೆಲೆಯ ಬಟ್ಟೆಗಳನ್ನು ಧರಿಸಿದ್ದರು ಎನ್ನಲಾಗಿದ್ದು, ಜೀನ್ಸ್ ಪ್ಯಾಂಟ್ ಬೆಲೆ 35 ಸಾವಿರ, 6 ಸಾವಿರ ರೂ. ಬೆಲೆಯ ಟೀ ಶರ್ಟ್ ಹಾಗೂ 12,500 ರೂ. ಬೆಲೆಯ ಶೂ ಧರಿಸಿದ್ದರು. ಈ ಬಟ್ಟೆಗಳನ್ನು ಪೊಲೀಸರು ಸದ್ಯಕ್ಕೆ ವಶಕ್ಕೆ ಪಡೆಸಿಕೊಂಡಿದ್ದಾರೆ.
ಕೃತ್ಯ ನಡೆದ ವೇಳೆ ನಟ ದರ್ಶನ್ ಅವರು ಈ ಬಟ್ಟೆಗಳನ್ನು ಧರಿಸಿದ್ದರು ಎನ್ನಲಾಗಿದ್ದು, ಸದ್ಯ ಈ ಬಟ್ಟೆಗಳನ್ನು ಒಗೆದು ಒಣಗಿ ಹಾಕಲಾಗಿತ್ತು. ಪೊಲೀಸರು ಆರ್. ಆರ್. ನಗರದಲ್ಲಿರುವ ದರ್ಶನ್ ಮನೆಯಿಂದ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಟ್ಟೆಗಳನ್ನು ವಿಧಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ತನಿಖೆಗಾಗಿ ಕಳುಹಿಕೊಟ್ಟಿದ್ದು, ಬಟ್ಟೆ ಮೇಲೆ ಇರುವ ಕಲೆಗಳನ್ನು ಪತ್ತೆಹಚ್ಚಲಾಗುವುದು ಎನ್ನಲಾಗಿದೆ.