ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಶಾಕ್ ನೀಡಿ ಹತ್ಯೆ ಮಾಡಿದ್ದನ್ನು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದರು. ಇಂತಹ ಶಾಕ್ ಡಿವೈಸ್ ತರೋದಕ್ಕೆ ಹಣ ನೀಡಿದ್ದೇ ಎ1 ಆರೋಪಿ ಪವಿತ್ರಾ ಗೌಡ ಅವರ ಬ್ಯುಸಿನೆಸ್ ಪಾರ್ಟನ್ ಸಮತಾ ಎಂಬುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಪವಿತ್ರಾ ಗೌಡ ಅವರ ಬ್ಯುಸಿನೆಸ್ ಪಾಟ್ನರ್ ಆಗಿರುವಂತ ಸಮತಾಗೆ ಎಸ್ಐಟಿ ಅಧಿಕಾರಿಗಳು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಇದಕ್ಕೂ ಮುನ್ನವೇ ರೇಣುಕಾಸ್ವಾಮಿ ಕೊಲೆ ನಡೆದ ನಂತ್ರ, ಪವಿತ್ರಾ ಗೌಡ ಹಾಗೂ ಸಮತಾ ಹಲವು ಭಾರಿ ದೂರವಾಣಿ ಸಂಭಾಷಣೆ ನಡೆಸಿರೋ ದಾಖಲೆಯೂ ಎಸ್ಐಟಿ ಪೊಲೀಸರು ಹೆಕ್ಕಿ ತೆಗೆದಿದ್ದಾರೆ.
ಇದಷ್ಟೇ ಅಲ್ಲದೇ ಸಮತಾ ಅವರು ಆರೋಪಿ ಧನರಾಜ್ ಗೆ ಶಾಕ್ ಡಿವೈಸ್ ತರೋದಕ್ಕೆ 3 ಸಾವಿರ ಹಣ ನೀಡಿರುವ ಮಾಹಿತಿಯೂ ದೊರೆತಿದೆ. ಈ ಹಿನ್ನಲೆಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರ ಬ್ಯುಸಿನೆಸ್ ಪಾರ್ಟನ್ ಆಗಿರೋ ಸಮತಾ ಅವರನ್ನು ಎಸ್ಐಟಿ ಬಂಧಿಸೋ ಸಾಧ್ಯತೆ ಇದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇನ್ಮುಂದೆ SP-DCP-IG ಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ: ಸಿಎಂ ಸೂಚನೆ
ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ, 30 ಜಿಲ್ಲೆಗಳಲ್ಲಿ 24.50 ಲಕ್ಷ ಜನರಿಗೆ ತೊಂದರೆ