ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಹದಿಮೂರು ಆರೋಪಿಗಳು ಇದೀಗ 6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇತ್ತ ಇನ್ಸ್ಟಾಗ್ರಾಮ್ ನಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನ್ ಫಾಲೋ ಮಾಡಿದ್ದೂ ಅಲ್ಲದೆ ದರ್ಶನ್ ಜೊತೆಗಿದ್ದ ಡಿಪಿಯನ್ನು ಕೂಡ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಫೋನ್ನಲ್ಲಿ ಪತ್ನಿಗೆ ಕರೆ ಮಾಡಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನಟ ದರ್ಶನ್ ವಿಜಯಲಕ್ಷ್ಮಿಗೆ ತಿಳಿಸಿದರು.
ಇದರ ಬೆನ್ನಲ್ಲೇ ಇದೀಗ ವಿಜಯಲಕ್ಷ್ಮಿ ದರ್ಶನ್ ಅವರನ್ನು ಅನ್ ಫಾಲೋ ಮಾಡಿ ಅವರ ಜೊತೆಗಿದ್ದ ಡಿಪಿ ಕೂಡ ತೆಗೆದಿದ್ದಾರೆ. ಈ ಒಂದು ಘಟನೆಯಿಂದ ದರ್ಶನ್ ಮತ್ತು ಪತ್ನಿ ವಿಜಯ್ ಲಕ್ಷ್ಮಿ ದಾಂಪತ್ಯದಲ್ಲಿ ಮತ್ತೆ ಬಿರುಕು ಮೂಡುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.