ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಇಂತಹ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಗೆ ಎಸ್ ಪಿಪಿ ವಾದಿಸಿ ಎ.13 ಆರೋಪಿ ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರಿಗೆ ಜಾಮೀನು ನೀಡಬಹುದು ಎಂಬುದಾಗಿ ವಾದಿಸಿದ್ದರು. ಇಂದು ಕಾಯ್ದಿರಿಸಿದ್ದಂತ ತೀರ್ಪು ಪ್ರಕಟಿಸಿದ್ದು, ಎ.13 ಆರೋಪಿ ದೀಪಕ್ ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಟ ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಪೊಲೀಸರ ಪರವಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸುತ್ತಾ, ಎ8 ರವಿಶಂಕರ್ ಜಾಕನಾದರೂ ಅಪಹಣದಲ್ಲಿ ಪಾತ್ರವಿದೆ. ಆತ ಬಟ್ಟೆಯಲ್ಲಿಯೂ ರೇಣುಕ್ಸಾವಮಿ ರಕ್ತದ ಕೆಲೆಗಳು ಪತ್ತೆಯಾಗಿವೆ. ಷಡ್ಯಂತ್ರ ಸಾಭೀತಿಗೆ ಒಂದೇ ಬಾರಿಗೆ ಎಲ್ಲ ಒಪ್ಪಂದವಾಗಬೇಕಿಲ್ಲ. ಎಲ್ಲಾ ಗೌಪ್ಯತೆಗಳೂ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ. ಹೀಗಾಗಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು. ಎ12 ಲಕ್ಷ್ಮಣ್ ಗೆ ಜಾಮೀನು ನೀಡಬಾರದು ಎಂದಿದ್ದರು.
ಇನ್ನೂ ಎ.13 ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ. ಅವರ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾತ್ರವೇ ಇದೆ. ಹೀಗಾಗಿ ಅವರಿಗೆ ಜಾಮೀನು ನೀಡಬಹುದು ಎಂಬುದಾಗಿ ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.
ಈ ವಾದವನ್ನು ಆಲಿಸಿದ್ದಂತ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು, ಎ13 ಆರೋಪಿ ದೀಪಕ್ ಗೆ ಜಾಮೀನು ಮಂಜೂರು ಮಾಡಿದೆ. ಆದರೇ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎ1 ಆರೋಪಿಯಾಗಿರುವಂತ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ಬಿಗ್ ಶಾಕ್ ನೀಡಲಾಗಿದೆ.
BIG NEWS: ತಿರುಪತಿ ಮಾದರಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ: ಸಿಎಂ ಸಿದ್ಧರಾಮಯ್ಯ
ಗೃಹಲಕ್ಷ್ಮಿ’ ಫಲಾನುಭವಿಗಳ ಖಾತೆಗೆ 1 ತಿಂಗಳ ಹಣ ಜಮೆಯ ವಿಚಾರ : ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್