ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸಂಬಂಧಿಸಿದಂತೆ ದರ್ಶನ್ ಮುಖ್ಯ ಪಾತ್ರ ವಹಿಸುವುದಕ್ಕೆ ಪೊಲೀಸರಿಗೆ ಇದುವರೆಗೂ ಒಂದಲ್ಲ ಎರಡಲ್ಲ 30 ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಹೌದು ಕೊಲೆಗೆ ದರ್ಶನ್ ಮುಖ್ಯ ಪಾತ್ರ ವಹಿಸಿದ್ದಕ್ಕೆ ಇದೀಗ ಪೊಲೀಸರಿಗೆ ಎಲ್ಲ ರೀತಿಯ ಸಾಕ್ಷಗಳು ಲಭ್ಯವಾಗಿವೆ.ದರ್ಶನ್ ವಿರುದ್ಧ ಒಂದಲ್ಲ ಎರಡಲ್ಲ ಮೂವತ್ತಕ್ಕೂ ಹೆಚ್ಚು ಸಾಕ್ಷಗಳು ಲಭ್ಯವಾಗಿವೆ ಎಲ್ಲಾ ರೀತಿ ಸಾಕ್ಷಾಧಾರಗಳು ಪೊಲೀಸರಿಗೆ ಲಭ್ಯವಾಗಿವೆ ಎಂದು ಹೇಳಲಾಗುತ್ತಿದೆ.
ಹೌದು ಚಿತ್ರದುರ್ಗದಿಂದ ಬೆಂಗಳೂರಿಗೆ ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬಂದಿದ್ದರಿಂದ ಆತನನ್ನು ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಶಟ್ ಒಂದರಲ್ಲಿ ಕೂಡಿಹಾಕಿ ಅಲ್ಲೇ ಮಾಡಿ ಭೀಕರವಾಗಿ ಕೊಲೆ ಮಾಡಿ ನಂತರ ಶವ ಸಾಗಾಟ ಮಾಡಿದ ಕ್ಷಣದವರೆಗೂ ಇಲ್ಲಿಯವರೆಗೆ ಒಟ್ಟು 30 ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿವೆ.ಪ್ರತಿಯೊಂದು ಸಾಕ್ಷಿಗಳನ್ನು ಪೊಲೀಸರು ಇದೀಗ ಸಂಗ್ರಹಿಸಿದ್ದಾರೆ.
ಸದ್ಯ ಈ ಒಂದು ಪ್ರಕರಣದಲ್ಲಿ ನಟ ದರ್ಶನವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ವಕೀಲರನ್ನು ಭೇಟಿಯಾಗಿ ಪತಿಯ ಪರ ನಿಂತಿದ್ದಾರೆ ಅಲ್ಲದೆ ಇತ್ತೀಚಿಗೆ ನಟ ದರ್ಶನ ಅವರನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಭೇಟಿಯಾಗಿದ್ದರು.