ದಾವಣಗೆರೆ : ಸಾವಿನಲ್ಲೂ ಪ್ರಚಾರ, ರಾಜಕಾರಣ ಮಾಡುತ್ತೇನೆ ಎನ್ನುತ್ತಿರುವವರು ವಿಕೃತ ಮನಸ್ಸಿನವರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು ಚಂದ್ರುಗೆ ಅಪಘಾತ ಆಗಿಲ್ಲ, ಅವನು ಆತ್ಮಹತ್ಯೆ ಮಾಡಿಕೊಳ್ಳುವವನು ಅಲ್ಲ. ಮಗನನ್ನು ಅಪಹರಣ ಮಾಡಿ ಬರ್ಬರ ಹತ್ಯೆ ಮಾಡಿದ್ದಾರೆ ನನ್ನ ಪುತ್ರನಿಗೆ ಈ ರೀತಿ ಆದರೆ ಜನಸಾಮಾನ್ಯರ ಪಾಡೇನು? ಯಾರು ರಕ್ಷಣೆ ನೀಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ ಎಂದು ಹೇಳಿದರು.
ಚಂದ್ರು ಬದುಕಿದ್ದರೆ ಇದಕ್ಕಿಂತ ಹತ್ತರಷ್ಟು ನೋಡುವಷ್ಟು ಭಾಗ್ಯ ಸಿಗುತಿತ್ತು. ಚಂದ್ರು ಸಾವಿಗೆ ಕಾರಣ ಇಂತಹವರೇ ಎಂದು ನಾನು ಆರೋಪ ಮಾಡಿಲ್ಲ.ಮಗನನ್ನು ಅಪಹರಣ ಮಾಡಿ ಬರ್ಬರ ಹತ್ಯೆ ಮಾಡಿದ್ದಾರೆ. ನನ್ನ ಮೇಲೆ ದ್ವೇಷ ಇದ್ದರೆ ನನ್ನನ್ನು ಬಲಿ ತೆಗೆದುಕೊಳ್ಳಬಹುದಿತ್ತು. ಹೇಡಿಗಳು ಇಂತಹ ಹೇಯ ಕೃತ್ಯ ನಡೆಸಿದ್ದಾರೆ. ಏನೂ ಅರಿಯದ, ಮುಗ್ಧ ಕಂದನನ್ನು ಬಲಿ ತೆಗೆದುಕೊಂಡಿದ್ದಾರೆ, ದೇವರು ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡುತ್ತಾನೆ ಎಂದರು ಅಳಲು ತೋಡಿಕೊಂಡರು.
BREAKING NEWS : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ‘ಟಿಪ್ಪು ಜಯಂತಿ’ ಸೇರಿ ಎಲ್ಲಾ ಆಚರಣೆಗೂ ಅನುಮತಿ ನೀಡಿದ ಪಾಲಿಕೆ