ದಾವಣಗೆರೆ : ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನಿಂದ ಇಡೀ ಕುಟುಂಬ ದುಃಖದಲ್ಲಿ ಮರುಗಿದೆ. ಸದ್ಯ, ಚಂದ್ರು ಅವರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಕೆಲವೇ ಹೊತ್ತಿನಲ್ಲಿ ಪಾರ್ಥಿವ ಶರೀದ ಕುಂದೂರು ಗ್ರಾಮದ ರೇಣುಕಾಚಾರ್ಯ ಮನೆ ತಲುಪಲಿದೆ.
ಸಹೋದರನನ್ನು ಕಳೆದುಕೊಂಡು ಮಾತನಾಡಿರುವ ರೇಣುಕಾಚಾರ್ಯ ಪುತ್ರಿ ಚಂದನಾ ಕಣ್ಣೀರಿಟ್ಟಿದ್ದಾರೆ, ಸುದ್ದಿಗಾರರ ಜೊತೆ ಮಾತನಾಡಿದ ಚಂದನಾ, ‘ನಾವೆಲ್ಲಾ ಸ್ನೇಹಿತರಂತೆ ಇದ್ದೆವು, ಇಂದು ಆತ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದಿದ್ದಾರೆ.
‘ಅಪ್ಪನಿಗೆ ಮಗನನ್ನು ಕಳೆದುಕೊಂಡ ಗಿಲ್ಟ್ ಕಾಡುತ್ತಿದೆ, ಕಳೆದ ಐದಾರು ತಿಂಗಳಿನಿಂದ ಅಪ್ಪನ ಜೊತೆ ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದನು. ಎಲ್ಲರೂ ಸೇರಿ ಟ್ರಿಪ್ ಹೋಗಲು ಯೋಚನೆ ಮಾಡಿದ್ದೆವು. ಆತನಿಗೆ ನೇಚರ್ ಎಂದರೆ ಬಹಳ ಇಷ್ಟ, ಅಪ್ಪನೂ ಆತನನ್ನು ಬಹಳ ಹಚ್ಚಿಕೊಂಡಿದ್ದರು. ಅಣ್ಣನ ಮಗ ಎಂದು ಭಾವಿಸಿರಲಿಲ್ಲ, ಸ್ವಂತ ಮಗನ ಹಾಗೆ ಹಚ್ಚಿಕೊಂಡಿದ್ದರು’ ಎಂದು ರೇಣುಕಾಚಾರ್ಯ ಪುತ್ರಿ ಚಂದನಾ ಕಣ್ಣೀರಿಟ್ಟಿದ್ದಾರೆ.
ರಾಜಕೀಯ ದ್ವೇಷದಿಂದ ಕೊಲೆ ನಡೆದಿದೆ. ಇದೊಂದು ವ್ಯವಸ್ಥಿತ ಕೊಲೆ, ಅವರಿಗೆ ದ್ವೇಷ ಇದ್ದರೆ ನನ್ನನ್ನು ಬಲಿ ಪಡೆಯಬಹುದಿತ್ತು, ನನ್ನ ಮೇಲಿನ ದ್ವೇಷದಿಂದ ಪುತ್ರನನ್ನು ಬಲಿ ತೆಗೆದುಕೊಂಡಿದ್ದಾರೆ, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಪುತ್ರ ಚಂದ್ರಶೇಖರ್ ಗೆ ಯಾರೂ ಶತ್ರುಗಳಿರಲಿಲ್ಲ, ಆತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದು, ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ .
BIGG NEWS: ಗಲ್ಫ್ ಆಫ್ ಕ್ಯಾಲಿಫೋರ್ನಿಯಾ ಪ್ರದೇಶದಲ್ಲಿ 5.8 ತೀವ್ರತೆಯ ಭೂಕಂಪ| Earthquake in California
Alert: ಈ ಸಣ್ಣ ತಪ್ಪಿನಿಂದಾಗಿ, ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತದೆ, ಹೀಗೆ ಮಾಡಬೇಡಿ
Alert: ಈ ಸಣ್ಣ ತಪ್ಪಿನಿಂದಾಗಿ, ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತದೆ, ಹೀಗೆ ಮಾಡಬೇಡಿ