ಬೆಂಗಳೂರು : ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ( Renukacharya) ಸಹೋದರನ ಪುತ್ರ ‘ಚಂದ್ರಶೇಖರ್ (24) ಮೃತದೇಹ ಇಂದು ಪತ್ತೆಯಾಗಿದೆ.
ಇದೀಗ ಘಟನೆ ನಡೆದ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ( ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು) ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಂದ್ರಶೇಖರ್ ಶವ ಪತ್ತೆಯಾಗುತ್ತಿದ್ದಂತೆ ರೇಣುಕಾಚಾರ್ಯ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನ ಸಾವಿಗೆ ನಾನೇ ಕಾರಣ..ಚಂದ್ರು ಚಂದ್ರು ಎಂದು ಗೋಗರೆದಿದ್ದಾರೆ. ಯಾರು ಕೂಡ ಶವ ಎನ್ನಬೇಡಿ, ಚಂದ್ರು ಎಂದು ಕರೆಯಿರಿ, ನನ್ನ ಶವಕ್ಕೆ ನೀನು ಬೆಂಕಿ ಇಡಬೇಕಾಗಿತ್ತು, ಆದರೆ ನೀನೆ ಹೋಗಿಬಿಟ್ಟೆ,,ಎಂದು ಮಗನನ್ನು ಅಪ್ಪಿಕೊಂಡು ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಾರಿನಲ್ಲಿ ಇಬ್ಬರು ಚಲಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನ್ಯಾಮತಿ ಬಳಿ ಚಂದ್ರಶೇಖರ್ ಕಾರಿನಲ್ಲಿ ಇಬ್ಬರು ಚಲಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಂದ್ರಶೇಖರ್ ಜೊತೆ ಮತ್ತೊಬ್ಬರು ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದ್ದು, ಆದರೆ ಕಾರಿನಲ್ಲಿ ಚಂದ್ರಶೇಖರ್ ಶವ ಮಾತ್ರ ಪತ್ತೆಯಾಗಿದೆ. ಇದರಿಂದ ಸಾಕಷ್ಟು ಶಂಕೆ ವ್ಯಕ್ತವಾಗಿದೆ. ಹೊನ್ನಾಳಿಯಿಂದ 5 ಕಿಮೀ ದೂರವಿರುವ ತುಂಗಾ ಕಾಲುವೆಯಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ.ತನಿಖೆ ಬಳಿಕ ಸತ್ಯಾಂಶ ಬಯಲಾಗಲಿದೆ.
ತನಿಖೆ ಬಳಿಕ ಸತ್ಯಾಂಶ ಬಯಲಾಗಲಿದೆ
ಚಂದ್ರಶೇಖರ್ ಸಾವಿನ ಪ್ರಕರಣದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವರು ‘ ಇಂದು ಕಾಲುವೆಯಲ್ಲಿ ಪಲ್ಟಿಯಾಗಿದ್ದ ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ, ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯಲಿದೆ. ಎಲ್ಲಾ ಕಡೆ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಪೊಲೀಸರ ತನಿಖೆ ಬಳಿಕ ಘಟನೆಯ ಸತ್ಯಾಂಶ ಬಯಲಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.