ಬೆಂಗಳೂರು : ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೊಲೆ ಪ್ರಕರಣದ A1 ಆರೋಪಿಯಾಗಿರಿವ ಪವಿತ್ರ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್,ಸೆಪ್ಟೆಂಬರ್ 30ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಟಾಮಿ ಸೇಬಾಸ್ಟಿಯನ್ ಇದೀಗ ವಾದಿಸುತ್ತಿದ್ದಾರೆ. ಆಕ್ಷೇಪಣೆಯಲ್ಲಿರುವ ಅಂಶವನ್ನು ಟಾಮಿ ಸೆಬಸ್ಟಿಯನ್ ಓದುತ್ತಿದ್ದಾರೆ.ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿದ ಆರೋಪವಿದೆ. ಶಡ್ಡಿಗೆ ಕರೆದೊಯ್ದು ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ ಆರೋಪವಿದೆ. ಹಲ್ಲೆಯಿಂದಾಗಿ ರೇಣುಕಾ ಸ್ವಾಮಿ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ತುಂಬಾ ಕ್ರೂರವಾಗಿ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಅಲ್ಲದೆ ನಾಲ್ಕು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಶೆಡ್ ಒಳಗೆ ಏನಾಯಿತು ಎಂಬುದನ್ನು ಇಬ್ಬರೂ ಸಾಕ್ಷಿಗಳು ಹೇಳಿದ್ದಾರೆ. ಶಡ್ ಒಳಗೆ ಏನಾಯಿತು ಎಂಬುದನ್ನು ಇಬ್ಬರೂ ಸಾಕ್ಷಿಗಳು ಹೇಳಿದ್ದಾರೆ ದರ್ಶನ್ ಜೊತೆ ಪವಿತ್ರ ಶೆಡ್ ಗೆ ಬಂದು ರೇಣುಕಾ ಸ್ವಾಮಿ ಕಪಾಳಕ್ಕೆ ಹೊಡೆದಳು.ಹೀಗೆಂದು ಸಾಕ್ಷಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಕಪಾಳಕ್ಕೆ ಹೊಡೆದಿರುವುದನ್ನು ಬಿಟ್ಟರೆ ಬೇರೆ ಆರೋಪವಿಲ್ಲ ನಂತರ ಆಕೆಯನ್ನು ಶೆಡ್ ನಿಂದ ಮನೆಗೆ ಡ್ರಾಪ್ ಮಾಡಲಾಗಿದೆ. ಆರೋಪ ಪಟ್ಟಿಯಲ್ಲಿ ಪದೇಪದೇ ಷಡ್ಯಂತರ ಎಂದು ಹೇಳಲಾಗಿದೆ. ಆದರೆ ಷಡ್ಯಂತರ ಏನೆಂದು ಸ್ಪಷ್ಟವಾಗಿಲ್ಲ.ಪವಿತ್ರ ಗೌಡ ಇಮೇಜ್ ಗೆ ಮೃತಪಟ್ಟ ವ್ಯಕ್ತಿ ದಕ್ಕೆ ತಂದಿದ್ದ ಹೀಗಾಗಿ ಆಕೆಗೆ ಆತನನ್ನು ದೂಷಿಸುವ ಹಕ್ಕಿದೆ. ಹಾಗೆ ರೇಣುಕಾ ಸ್ವಾಮಿ ಕೃತ್ಯವನ್ನು ದರ್ಶನ್ ಅವರಿಗೆ ಹೇಳಿದ್ದಾಳೆ. ಪವಿತ್ರ ಗೌಡ ಹೀಗೆ ಹೇಳುವುದರಲ್ಲಿ ತಪ್ಪೇನಿದೆ?
ಕಪಾಳಕ್ಕೆ ಹೊಡೆದಿದ್ದನ್ನು ಬಿಟ್ಟರೆ ಬೇರೆ ಪಾತ್ರವಿಲ್ಲ. ಪವಿತ್ರ ಮಾಸ್ಟರ್ ಮೈಂಡ್ ಎಂದು ಹೇಳುವುದು ಸರಿಯಲ್ಲ. ರೇಣುಕಾ ಸ್ವಾಮಿ ಕೊಲೆಯಲ್ಲಿ ಆಕೆಯ ಯಾವುದೇ ಪಾತ್ರವಿಲ್ಲ. ಆಕೆಗೆ ಕೊಲೆಯ ಉದ್ದೇಶವಿತ್ತು ಎಂದು ಹೇಳಲಾಗುವುದಿಲ್ಲ. ಹಾಗಾಗಿ ಪವಿತ್ರ ಗೌಡಗೆ ಜಾಮೀನು ನೀಡುವಂತೆ ಅವರ ಪರ ಹಿರಿಯವಕೀಲ ಟಾಮಿ ಸೆಬಸ್ಟಿಯನ್ ಮನವಿ ಮಾಡಿದರು.